ಸೋನಿಪತ್: ಹರಿಯಾಣದ ಸೋನಿಪತ್ ಜಿಲ್ಲೆಯ ಇಸಾಪುರ್ ಖೆಡಿ ಗ್ರಾಮದಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್ ಧರಿಸುವುದನ್ನು ಹಾಗೂ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.
ಗ್ರಾಮದ ಯುವತಿಯರು ಪ್ರೀತಿ-ಪ್ರೇಮ ಎಂಬ ಅಮಲಿನಲ್ಲಿ ಮನೆ ಬಿಟ್ಟು ಓಡಿ ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇಸಾಪುರ್ ಖೆಡಿ ಗ್ರಾಮ ಪಂಚಾಯತ್ ವರ್ಷದ ಹಿಂದೆಯೇ ಈ ತೀರ್ಪು ಪ್ರಕಟಿಸಿತ್ತು.
ಈ ನಿಯಮ ಜಾರಿಯಾದ ಬಳಿಕ ಗ್ರಾಮದ ಸ್ಥಿತಿ ಸುಧಾರಿಸಿದೆ ಎಂದು ಗ್ರಾಮ ಸರ್ಪಂಚ್ ಪ್ರೇಮ್ ಸಿಂಗ್ ಬುಧವಾರ ತಿಳಿಸಿದರು. ‘ನಮ್ಮ ಗ್ರಾಮದಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್ ಹಾಗೂ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ಜೀನ್ಸ್ ಪ್ಯಾಂಟ್ ಹಾಗೂ ಮೊಬೈಲ್ ಫೋನ್ ಬಳಕೆಯಿಂದ ಗ್ರಾಮದ ಯುವತಿಯರು ದಾರಿತಪ್ಪಿದ್ದಾರೆ ಎಂದು ಹೇಳುವುದಿಲ್ಲ. ಆದರೆ, ಈ ಆಧುನಿಕ ಪ್ರವೃತ್ತಿ ಯುವತಿಯರಿಗೆ ಸರಿಹೊಂದುವುದಿಲ್ಲ’ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
‘ಗ್ರಾಮ ಪಂಚಾಯತ್ ಹೊರಡಿಸಿರುವ ನಿರ್ಣಯ ಸಂಪೂರ್ಣವಾಗಿ ತಪ್ಪಾಗಿದೆ. ಪುರುಷರ ಮನಸ್ಥಿತಿಯಲ್ಲಿ ಸಮಸ್ಯೆ ಇದೆಯೇ ಹೊರತು, ಯುವತಿಯರು ಧರಿಸುವ ಬಟ್ಟೆಯಲ್ಲಿ ಅಲ್ಲ. ಕೇವಲ ಬಟ್ಟೆಯಿಂದ ಯುವತಿಯರ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ’ ಎಂದು ಗ್ರಾಮದ ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.
Comments are closed.