9
ಜಮ್ಮು : ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಸೇರಿದ ಗುಲಾಮ್ ಅಕ್‌ಬರ್ ಎಂಬ ವ್ಯಕ್ತಿಯೋರ್ವ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಮುಂಚೂಣಿ ಸೇನಾ ಠಾಣೆಯೊಂದರ ಆಸುಪಾಸಿನಲ್ಲಿ ಠಳಾಯಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಯೋಧರು ಆತನನ್ನು ಬಂಧಿಸಿದ್ದಾರೆ.
ಪಿಓಕೆಯ ಬಂದಿ -ಅಬ್ಟಾಸ್‌ಪುರ ತೆಹಶೀಲ್‌ನ ಮಾರ್ಕೋಟ್ ಗ್ರಾಮದ ನಿವಾಸಿಯಾಗಿರುವ ಅಕ್‌ಬರ್ ನನ್ನು ಇಂದು ಶನಿವಾರ ನಸುಕಿನ 1.30ರ ಸುಮಾರಿಗೆ ಕುಂಜನ್ ಹೊರಠಾಣೆ ಸಮೀಪ ಬಂಧಿಸಿ ಸೇನಾ ಶಿಬಿರಕ್ಕೆ ಒಯ್ದು ಪ್ರಶ್ನಿಸಲಾಯಿತು. ಬಳಿಕ ಅಕ್‌ಬರ್‌ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಒಪ್ಪಿಸಲಾಯಿತು.
ಕಳೆದ ಎಪ್ರಿಲ್ 22ರಂದು 12 ವರ್ಷದ ಪಿಓಕೆ ಬಾಲಕನೋರ್ವ ತಪ್ಪಾಗಿ ಪೂಂಚ್ ಜಿಲ್ಲೆಯ ಗಡಿ ದಾಟಿ ಒಳಗೆ ಬಂದಿದ್ದ. ಎ.25ರಂದು ಆತನನ್ನು ಸದ್ಭಾವನೆಯ ಕ್ರಮವಾಗಿ ಪಾಕಿಸ್ಥಾನಕ್ಕೆ ಒಪ್ಪಿಸಲಾಯಿತು.
-ಉದಯವಾಣಿ
Comments are closed.