ರಾಷ್ಟ್ರೀಯ

ಯುಪಿಎಸ್ಸಿ ಟಾಪರ್ ಅನುದೀಪ್’ಗೆ ಉತ್ತಮ ಫಲಿತಾಂಶ ಪಡೆಯಲು ನೆರವಾಗಿದದ್ದು ಏನು ಗೊತ್ತೇ..?

Pinterest LinkedIn Tumblr

ಹೈದರಾಬಾದ್: ಯುವ ಪೀಳಿಗೆ ಗೂಗಲ್ ಹಾಗೂ ಯೂಟ್ಯೂಬ್ ನ್ನು ಕೆವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ಬಳಸುತ್ತಾರೆ. ಹಾಗಾಗಿಯೇ ಪರೀಕ್ಷೆ ಸಮಯದಲ್ಲಿ ಯೂಟ್ಯೂಬ್, ಗೂಗಲ್ ನ್ನು ಬಳಕೆ ಮಾಡದಂತೆ ಎಚ್ಚರವನ್ನೂ ವಹಿಸಲಾಗುತ್ತದೆ. ಆದರೆ ಯುಪಿಎಸ್ ಸಿ ಟಾಪರ್ ಅನುದೀಪ್ ದುರಿಶೆಟ್ಟಿ ಅವರು ಗೂಗಲ್ ಹಾಗೂ ಯೂಟ್ಯೂಬ್ ನ್ನು ಬಳಸಿಕೊಂಡಿದ್ದರ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಿ.

ಅನುದೀಪ್ ದುರಿಶೆಟ್ಟಿ ಯುಪಿಎಸ್ ಸಿ ಪರೀಕ್ಷೆಗಳಿಗೆ ಯಾವುದೇ ಕೋಚಿಂಗ್ ಪಡೆಯದೇ ಗೂಗಲ್ ಹಾಗೂ ಯೂಟ್ಯೂಬ್ ನ್ನೇ ಆಧರಿಸಿ ತಯಾರಿ ನಡೆಸಿದ್ದಾರೆ. ತಾವು ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಗೂಗಲ್ ಹಾಗೂ ಯೂಟ್ಯೂಬ್ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಯುಪಿಎಸ್ ಸಿ ಟಾಪರ್

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯೊಂದಿಗೆ ಈ ಬಗ್ಗೆ ಮಾತನಾಡಿರುವ ದುರಿಶೆಟ್ಟಿ, ನಾನು ಯಾವುದೇ ಕೋಚಿಂಗ್ ಗೆ ಹೋಗಲಿಲ್ಲ ಬದಲಾಗಿ ಹೆಚ್ಚು ಸಮಯ ಗೂಗಲ್ ಹಾಗೂ ಯೂಟ್ಯೂಬ್ ನೆರವಿವಿಂದಲೇ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದೆ ಎಂದು ಹೇಳಿದ್ದಾರೆ.

ಯುಪಿಎಸ್ ಸಿ ಪರೀಕ್ಷೆ ಬರೆಯಬೇಕು ಎಂದುಕೊಂಡಿರುವ ಯುವಕರಿಗೂ ಈ ಬಗ್ಗೆ ಕಿವಿಮಾತು ಹೇಳಿರುವ ದುರಿಶೆಟ್ಟಿ, ಪರೀಕ್ಷೆಗಳಿಗೆ ತಯಾರಿ ನಡೆಸಬೇಕಾದರೆ ಕೋಚಿಂಗ್ ಗೆ ಹೋಗಲೇಬೇಕೆಂದೇನೂ ಇಲ್ಲ. ಇಂದಿನ ದಿನಗಳಲ್ಲಿ ಎಲ್ಲವೂ ಆನ್ ಲೈನ್ ನಲ್ಲಿಯೇ ಸಿಗುತ್ತವೆ, ಯಾವುದೇ ವಿಷಯದಲ್ಲಿ ಒಂದು ವೇಳೆ ಅನುಮಾನ ಬಂದರೆ ಯೂಟ್ಯೂಬ್ ನಲ್ಲಿ ಅದನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

Comments are closed.