ರಾಷ್ಟ್ರೀಯ

ಜೀವದ ಹಂಗನ್ನು ತೊರೆದು ತಾಯಿಯ ಕೈಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಜಿಗಿದು ಕಾಪಾಡಿದ ಗಗನಸಖಿ!

Pinterest LinkedIn Tumblr

ಮುಂಬೈ: ವಿಮಾನ ಸಂಸ್ಥೆ ಸಿಬ್ಬಂದಿ ಅವರಿಗೆ ತುರ್ತುಸಮಯದಲ್ಲಿ ಜೀವಗಳನ್ನು ಕಾಪಾಡಲು ತರಬೇತಿ ನೀಡಲಾಗಿರುತ್ತದೆ. ಅಂತಹದಲ್ಲಿ ಗಗನಸಖಿಯೊಬ್ಬರು ತಮ್ಮ ಜೀವದ ಹಂಗನ್ನು ತೊರೆದು ಜಿಗಿದು ತಾಯಿಯ ಕೈಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ್ದಾರೆ.

ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಾಯಿಯ ಕೈಯಿಂದ ಮಗು ಕೆಳಗೆ ಬೀಳುತ್ತಿದ್ದುದ್ದನ್ನು ಗಮನಿಸಿದ ಜೆಟ್ ಏರ್ ವೇಸ್ ನ ಗಗನಸಖಿ ಮಿತಾನ್ಶಿ ವೈದ್ಯಾ ಜಿಗಿದು ಮಗು ಕೆಳಗೆ ಬೀಳದಂತೆ ಹಿಡಿದುಕೊಂಡಿದ್ದು ಮಗುವನ್ನು ರಕ್ಷಿಸಿದ್ದಾರೆ.

ಮುಂಬೈನಿಂದ ಅಹಮದಾಬಾದ್ ಗೆ ಗೃಹಿಣಿಯೊಬ್ಬರು ತನ್ನ 10 ತಿಂಗಳ ಗಂಡು ಮಗುವಿನೊಂದಿಗೆ ತೆರಳುತ್ತಿದ್ದರು. ಸೆಕ್ಯೂರಿಟಿ ಚೆಕ್ ಕೌಂಟರ್ ಬಳಿ ಈ ಅವಘಡ ಸಂಭವಿಸಿದ್ದು ಕೂಡಲೇ ಜಾಗೃತಳಾದ ಮಿತಾನ್ಶಿ ಮಗುವನ್ನು ಕಾಪಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗೃಹಿಣಿ ಗುಲಾಫಾ ಶೇಕ್, ಮಿತಾಶ್ಮಿ ವೈದ್ಯಾ ಅವರು ಕೆಳಗೆ ಬೀಳುತ್ತಿದ್ದ ನನ್ನ ಮಗುವನ್ನು ಕಾಪಾಡಿದ್ದಾರೆ ಅವರಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದ್ದಾರೆ.

Comments are closed.