ನವದೆಹಲಿ: ಆಕಾಶದಲ್ಲಿ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್ ಮತ್ತು ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಲು ಟೆಲೆಕಾಂ ಆಯೋಗ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ನಡೆದ ಟೆಲೆಕಾಂ ಆಯೋಗದ ಸಭೆಯಲ್ಲಿ ವಿಮಾನದಲ್ಲಿ ಗ್ರಾಹಕರಿಗೆ ಮೊಬೈಲ್ ಮತ್ತು ಅಂತರ್ಜಾಲ ಸೇವೆಗಳ ಬಳಕೆಗೆ ಅವಕಾಶ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಾಡಿದ್ದ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಲಾಗಿದೆ.
ಟೆಲಿಕಾಂ ಇಲಾಖೆಯ ಕುಂದುಕೊರತೆಗಳ ನಿವಾರಣೆಗೆ ಒಂಬುಡ್ಸ್ ಮನ್ ಹುದ್ದೆ ಸೃಷ್ಟಿಗೂ ಟೆಲಿಕಾಂ ಆಯೋಗ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಿ ಮತ್ತು ವಿದೇಶಿ ಪ್ರಯಾಣ ಬೆಳೆಸುವವರಿಗೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆ ಕಲ್ಪಿಸುವ ಬಗ್ಗೆ ದೂರಸಂಪರ್ಕ ಇಲಾಖೆಯು ಆಗಸ್ಟ್ 20ರಂದು ಟ್ರಾಯ್ ಸಲಹೆಯನ್ನು ಕೇಳಿತ್ತು. ಬಳಿಕ ವಿಮಾನ 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್ ಸಂಪರ್ಕ ನೀಡಬಹುದು ಟ್ರಾಯ್ ಶಿಫಾರಸು ಮಾಡಿತ್ತು.
Comments are closed.