ಕೋಲ್ಕತ: ಪಶ್ಚಿಮ ಬಂಗಾಲದ ಎಡ ರಂಗ ನೇತೃತ್ವದ ಪ್ರಪ್ರಥಮ ಸರಕಾರದಲ್ಲಿ 1977-87ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಮಾರ್ಕ್ಸಿಸ್ಟ್ ಅರ್ಥಶಾಸ್ತ್ರಜ್ಞ ಅಶೋಕ್ ಮಿತ್ರ ಅವರು ಇಂದು ಮಂಗಳವಾರ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಅಶೋಕ್ ಮಿತ್ರ ಅವರು 1947 ಭಾರತ ವಿಭಜನೆಗೊಂಡಾಗ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದರು. ಢಾಕಾ ವಿವಿಯಲ್ಲಿ ಪದವಿ ಶಿಕ್ಷಣ ಪಡೆದ ಅವರು ಬನಾರಸ್ ಹಿಂದು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮಿತ್ರ ಅವರು 1950ರ ಆದಿಯಲ್ಲಿ ಸ್ಥಾಪಿತವಾದ ದಿಲ್ಲಿ ಸ್ಕೂಲ್ ಆಫ್ ಇಕಾನಮಿಕ್ಸ್ ಇದರ ಹಳೆ ವಿದ್ಯಾರ್ಥಿಯಾಗಿದ್ದಾರೆ. ಮಿತ್ರ ಅವರು ನೆದರ್ಲಂಡ್ಸ್‌ಗೆ ತೆರಳಿ ಅಲ್ಲಿ ಪಿಎಚ್‌ಡಿ ಪದವಿ ಪಡೆದರು.
ಮಿತ್ರ ಅವರ ವಿಶ್ವ ಬ್ಯಾಂಕ್ ಗಾಗಿ ಕೆಲಸ ಮಾಡಿದ್ದಾರೆ; ಭಾರತದ ಸರಕಾರದ ಆರ್ಥಿಕ ಸಲಹೆಗಾರರಾಗಿಯೂ ದುಡಿದಿದ್ದಾರೆ. ಭಾರತ ಸರಕಾರದ ಕೃಷಿ ಧಾರಣೆ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
-ಉದಯವಾಣಿ
Comments are closed.