ರಾಷ್ಟ್ರೀಯ

ಮೆಟ್ರೋ ಪ್ರಯಾಣದಲ್ಲಿ ಅಪ್ಪಿಕೊಂಡ ಜೋಡಿಯ ಥಳಿಸಿದ ಪ್ರಯಾಣಿಕರು

Pinterest LinkedIn Tumblr

ಕೋಲ್ಕತಾ: ಕೋಲ್ಕತಾ ಮೆಟ್ರೋದಲ್ಲಿ ಸೋಮವಾರ ರಾತ್ರಿ ಜೋಡಿಯೊಂದು ಹತ್ತಿರತ್ತಿರ ನಿಂತಿದ್ದ ಕಾರಣಕ್ಕೆ ಮತ್ತು ಪರಸ್ಪರ ಅಪ್ಪಿಕೊಂಡಿದ್ದರಿಂದ ಕೋಪಗೊಂಡ ಪ್ರಯಾಣಿಕರ ಗುಂಪು ಜೋಡಿಯನ್ನು ನಿಂದಿಸಿ, ಥಳಿಸಿ ರೈಲಿನಿಂದ ಹೊರ ಹಾಕಿದ ಪ್ರಸಂಗವೊಂದು ನಡೆದಿದೆ.

ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ಜೋಡಿ ತಬ್ಬಿಕೊಂಡಿದ್ದರು. ಈ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರು ಕೋಪಗೊಂಡು ಜೋಡಿಗೆ ಕರೆದು ಪ್ರಶ್ನಿಸಿದ್ದಾರೆ. ಆಗ ಯುವಕ ಹಾಗೂ ವೃದ್ಧನ ನಡುವೆ ವಾಗ್ವಾದ ನಡೆದಿದೆ. ವೃದ್ಧ ಹಾಗೂ ಆ ಜೋಡಿಯ ಮಧ್ಯೆ ಜಗಳ ಆರಂಭವಾದಾಗ ಸಹ ಪ್ರಯಾಣಿಕರು ವೃದ್ಧನನ್ನು ಬೆಂಬಲಿಸಿ ಜೋಡಿಯನ್ನು ನಿಂದಿಸಿದ್ದಾರೆ.

ಈ ಜಗಳ ವಿಕೋಪಕ್ಕೆ ತೆರಳಿ ಜೋಡಿ ದಮ್ ದಮ್ ಸ್ಟೇಷನ್‍ನಲ್ಲಿ ಇಳಿಯುತ್ತಿದ್ದಂತೆ ಸಾರ್ವಜನಿಕರು ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕನನ್ನು ಥಳಿಸುವಾಗ ಯುವತಿ ಆತನನ್ನು ರಕ್ಷಿಸಲು ಮುಂದಾಗಿದ್ದು, ಜನರು ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಹಲ್ಲೆ ನಡೆಸುವಾಗ ನೀವು ಏಕೆ ಒಂದು ರೂಮ್‍ನ್ನು ತೆಗೆದುಕೊಳ್ಳುವುದ್ದಿಲ್ಲ ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ನಿಲ್ದಾಣದಲ್ಲಿದ್ದ ಕೆಲವರು ಯುವಕ-ಯುವತಿಯನ್ನು ರಕ್ಷಿಸಿ ಕಳುಹಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಲಾಗವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಯವಕ-ಯುವತಿಯ ಮೇಲೆ ಹಲ್ಲೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Comments are closed.