ರಾಷ್ಟ್ರೀಯ

ಮತ್ತೆ ಮರಳು ಸುನಾಮಿ ಸಾಧ್ಯತೆ; ರಾಜ್ಯದಲ್ಲೂ ಮಳೆ ಮುನ್ಸೂಚನೆ

Pinterest LinkedIn Tumblr

01
ಹೊಸದಿಲ್ಲಿ: ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಕಂಗೆಡಿಸಿದ್ದ ಮರಳ ಸುನಾಮಿ ಮತ್ತೆ ಹಲವು ರಾಜ್ಯಗಳಿಗೆ ಅಪ್ಪಳಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಳೆ ಸಾಧ್ಯತೆ ಹೆಚ್ಚಿದ್ದು, ಪರಿಸ್ಥಿತಿ ನಿರ್ವಹಣೆಗೆ ಸರ್ವಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ.

ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಕೇರಳ ಮತ್ತು ರಾಜ್ಯದ ಕರಾವಳಿ ತೀರ ಸಹಿತ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ್ದ ಭಾರಿ ಮರಳು ಸುನಾಮಿ ಮತ್ತು ಬಿರುಗಾಳಿ, ಮಳೆಗೆ 124 ಜನರು ಮೃತಪಟ್ಟು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈಶಾನ್ಯ ಭಾರತ ಮತ್ತು ಉತ್ತರ ಭಾರತದಲ್ಲೂ ಮಳೆ ಮುನ್ಸೂಚನೆ ನೀಡಲಾಗಿದ್ದು, ಕಳೆದ ಗುರುವಾರದಂತೆ ಮರಳು ಬಿರುಗಾಳಿ ಬೀಸುವ ಸಾಧ್ಯತೆಯೂ ಹೆಚ್ಚಿದೆ ಎಂದು ಸೂಚನೆ ನೀಡಲಾಗಿದೆ.

ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಕಂಗೆಡಿಸಿದ್ದ ಮರಳು ಸುನಾಮಿಗೆ ನೂರಾರು ಮರಗಳು ಧರೆಗುರುಳಿದ್ದು, ಎರಡು ದಿನಗಳ ಅವಧಿಯಲ್ಲಿ ಮಳೆ ಪೀಡಿತ ರಾಜ್ಯಗಳಲ್ಲಿ ಕನಿಷ್ಠ 12,000 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ, 2,500ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ ಎಂದು ಸರಕಾರ ಹೇಳಿದೆ.

Comments are closed.