ರಾಷ್ಟ್ರೀಯ

ಪತ್ನಿ, ಮಕ್ಕಳಿಗೆ ಗುಂಡಿಕ್ಕಿ, ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ

Pinterest LinkedIn Tumblr

ಅಗರ್ತಾಲ: ತ್ರಿಪುರ ರಾಜ್ಯ ರೈಫಲ್ಸ್(ಟಿಎಸ್ಆರ್)ನ ಯೋಧನೊಬ್ಬ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಟಿಎಸ್ ಆರ್ 1ನೇ ಬಟಾಲಿಯನ್ ಗೆ ಸೇರಿದ ಯೋಧ ಮಾಣಿಕ್ ಘೋಷ್ ಅವರು ಇಂದು ಬೆಳಗ್ಗೆ ಅಗರ್ತಾಲದ ಸುಭಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಸರ್ವೀಸ್ ರಿವಾಲ್ವಾರ್ ನಿಂದ ಪತ್ನಿ ರತ್ನಾ ಘೋಷ್(34), ಪುತ್ರ ದೀಪ್ ರಾಜ್ ಘೋಷ್(10) ಹಾಗೂ ಪುತ್ರಿ ಇಪ್ಸಿತಾ(4)ಗಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದೃಷ್ಟವಶಾತ್ ಆತನ ತಂದೆ ಮತ್ತು ಸಹೋದರ ಮಾಣಿಕ್ ಘೋಷ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.

ಘಟನೆಯ ನಂತರ ಸುಭಾಸನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ಉತ್ತರ ತ್ರಿಪುರದಲ್ಲಿ ಬಿಎಸ್ ಎಫ್ ಯೋಧರೊಬ್ಬರು ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಯೋಧ ಪತ್ನಿ, ಮಕ್ಕಳನ್ನು ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

16 ವರ್ಷಗಳ ಹಿಂದೆ ರೈಫಲ್ ಮ್ಯಾನ್ ಆಗಿ ಟಿಎಸ್ಆರ್ ಸೇರಿದ್ದ ಮಾಣಿಕ್ ಘೋಷ್, ಒಂದು ಅಪಘಾತದ ಬಳಿಕ ಶಸ್ತ್ರ ರಹಿತ ಕೆಲಸ ಮಾಡುತ್ತಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ ಕುಟುಂಬ ಜಗಳವೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಾಣಿಕ್ ಪತ್ನಿಯ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ನಿತ್ಯ ಮನೆಯಲ್ಲಿ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Comments are closed.