ರಾಷ್ಟ್ರೀಯ

ನಾಲ್ಕು ಶತಮಾನಗಳಿಂದ ಈ ಹಳ್ಳಿಯಲ್ಲಿ ಮಗು ಹೇರಲು ನಿಷೇಧ!

Pinterest LinkedIn Tumblr


ಮಧ್ಯಪ್ರದೇಶ: ಇಲ್ಲಿನ ರಾಜ್​ಗಡ್​ ಜಿಲ್ಲೆಯ ಸಂಕಾಯ ಶ್ಯಾಮ್ ಜಿ ಗ್ರಾಮದಲ್ಲಿ ಮಗುವನ್ನು ಹೆರುವಂತಿಲ್ಲ! ಸುಮಾರು 400 ವರ್ಷಗಳಿಂದ ಈ ಗ್ರಾಮದಲ್ಲಿ ಮಗುವನ್ನು ಹೆರುವುದನ್ನು ನಿಷೇಧಿಸಲಾಗಿದೆ. ಅಂದರೆ ಗರ್ಭಿಣಿಯರಿಗೆ ತಿಂಗಳು ತುಂಬುತ್ತಿದ್ದಂತೆ ಗ್ರಾಮದ ಹೊರಗಿನ ಒಂದು ಗುಡಿಸಿಲಿಗೆ ಕರೆದುಕೊಂಡು ಹೋಗಿ ಬಿಡಲಾಗುತ್ತದೆ.

16ನೇ ಶತಮಾನದಿಂದ ನಡೆದು ಬಂದ ಸಂಪ್ರದಾಯವಿದು. ಇದು ದೇವರ ಆದೇಶವೆಂದೇ ಅಲ್ಲಿನ ಜನರ ನಂಬಿಕೆ. ಹಿರಿಯರು ಹಾಕಿಕೊಟ್ಟ ಪದ್ಧತಿಯನ್ನೇ ಈಗಿನವರೂ ಮುಂದುವರಿಸಿಕೊಂಡು ಹೋಗಿದ್ದಾರೆ. ಒಂದೊಮ್ಮೆ ಯಾರಾದರೂ ಮಹಿಳೆ ಗ್ರಾಮದೊಳಗೇ ಮಗುವನ್ನು ಹೆತ್ತರೆ ಅದು ವಿರೂಪಗೊಂಡಿರುತ್ತದೆ. ಅಥವಾ ತಾಯಿ ಅಥವಾ ಮಗು ಯಾರಾದರೊಬ್ಬರು ಸಾಯುತ್ತಾರೆ ಎಂದು ಇಲ್ಲಿನವರು ಪ್ರತಿಪಾದಿಸುತ್ತಾರೆ. ಅದಕ್ಕಾಗಿಯೇ ಗ್ರಾಮದ ಆಚೆಗೆ ಒಂದು ಪ್ರತ್ಯೇಕ ಕೋಣೆಯನ್ನು ಕಟ್ಟಲಾಗಿದೆ.

ಗ್ರಾಮದಲ್ಲಿ ದೇವತೆಗಳು ದೇಗುಲವನ್ನು ನಿರ್ಮಾಣ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಗೋದಿಯನ್ನು ಬೀಸಿ ಶಬ್ದ ಮಾಡಿ ಅಡ್ಡಿಪಡಿಸಿದ್ದಳಂತೆ. ಅದಕ್ಕಾಗಿ ಕೋಪಗೊಂಡ ದೇವತೆಗಳು ಗ್ರಾಮದಲ್ಲಿ ಯಾವ ಮಗು ಜನಿಸಬಾರದು ಎಂದು ಶಾಪ ಕೊಟ್ಟರಂತೆ.

Comments are closed.