ಕೊಯಮುತ್ತೂರು: ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಡಿಎಸ್‌ಪಿ ಅವರ ಕೈಗೆ ಸಿಕ್ಕಿಬಿದ್ದ ಮುರುಗನಂದಂ ಎಂಬ ಖಾಸಗಿ ಬಸ್ ಚಾಲಕನಿಗೆ ವಾಹನ ದಟ್ಟನೆಯ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸುವ ಶಿಕ್ಷೆ ನೀಡಲಾದ ಅತ್ಯಪರೂಪದ ಘಟನೆ ವರದಿಯಾಗಿದೆ.
ಪೊಲ್ಲಾಚಿಯಿಂದ ಮೀನಾಕ್ಷಿಪುರಂ ನ 50 ಕಿ.ಮೀ. ದೂರ ಕ್ರಮಿಸುವ ಖಾಸಗಿ ಬಸ್ಸಿನ ಚಾಲಕ, 28ರ ಹರೆಯದ ಮುರುಗನಂದಂ ಗೆ ವಿರುದ್ಧ ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವ ಚಟ ಇರುವ ಬಗ್ಗೆ ಹಲವರಿಂದ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ಕೆಲವರು ವಿಡಿಯೋ ಚಿತ್ರಿಕೆಯ ದಾಖಲೆಯನ್ನೂ ಟ್ರಾಫಿಕ್ ಪೊಲೀಸ್ ಇಲಾಖಾಧಿಕಾರಿಗಳಿಗೆ ಸಲ್ಲಿಸಿದ್ದರು.
ಕೊನೆಗೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮುರುಗನಂದಂ ಗೆ ಅತ್ಯಂತ ವಾಹನ ದಟ್ಟನೆಯ ರಸ್ತೆಯಲ್ಲಿ ಗಾಂಧಿ ಪ್ರತಿಮೆಯ ಬಳಿ ಸುಮಾರು ಎಂಟು ತಾಸುಗಳ ಕಾಲ ಟ್ರಾಫಿಕ್ ನಿಯಂತ್ರಿಸುವ ಶಿಕ್ಷೆಯನ್ನು ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.