ರಾಷ್ಟ್ರೀಯ

ಕರ್ನಾಟಕ ಚುನಾವಣೆಯಲ್ಲಿ ದೇಶದಲ್ಲೇ ಅತಿಹೆಚ್ಚು ಆಮಿಷವೊಡ್ಡಿದ ರಾಜ್ಯ!

Pinterest LinkedIn Tumblr


ನವದೆಹಲಿ: ಚುನಾವಣೆಯಲ್ಲಿ ದೇಶದಲ್ಲೇ ನಮಗಿಂತ ಅತಿ ಹೆಚ್ಚು ಆಮಿಷವೊಡ್ಡುವ ರಾಜ್ಯ ಬೇರೊಂದಿಲ್ಲ ಎಂಬುದು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಿಂದ ತಿಳಿದುಬಂದಿದೆ.

ಈ ಚುನಾವಣೆಯಲ್ಲಿ ಒಟ್ಟು ರೂ. 186 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಇನ್ನಿತರ ವಸ್ತುಗಳ ವಶಪಡಿಸಿಕೊಳ್ಳಲಾಗಿದ್ದು, ಈವರೆಗೆ ದೇಶದ ಯಾವುದೇ ಚುನಾವಣೆಯಲ್ಲೂ ಇಷ್ಟು ಬೃಹತ್​ ಮೌಲ್ಯದ ನಗದು, ಮದ್ಯ ಹಾಗೂ ಇನ್ನಿತರ ಅಮಿಷವೊಡ್ಡುವ ವಸ್ತುಗಳನ್ನು ವಶಪಡಿಸಿಕೊಂಡ ನಿದರ್ಶನ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲೂ ಹಣಬಲದ ಪಾತ್ರ ಜೋರಾಗಿಯೇ ಕಂಡುಬಂದಿದ್ದು, 26 ಪೇಡ್​ ನ್ಯೂಸ್ ಪ್ರಕರಣಗಳು ದಾಖಲಾಗಿವೆ. 96.66 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದು, 24.78 ಕೋಟಿ ರೂ. ಮೌಲ್ಯದ ಮದ್ಯ ಹಾಗೂ 66 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿಯೇ ಅತಿ ಹೆಚ್ಚು ಅಂದರೆ 150 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಕಳೆದ ಲೋಕಸಭೆ ಚುನಾವಣೆ ವೇಳೆಗೆ ಹೋಲಿಸಿದರೆ ಕರ್ನಾಟಕದಲ್ಲಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಮಾಣ ಶೇ. 6ರಷ್ಟು ಹೆಚ್ಚಳವಾಗಿದ್ದು, 2013ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಶೇ.8ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

Comments are closed.