ಅಹಮದಾಬಾದ್: ಸೆಲ್ಫಿ ವಿಚಾರಕ್ಕಾಗಿಯೇ ಮದುವೆಯೊಂದು ಮುರಿದು ಬಿದ್ದಿರುವ ವಿಚಿತ್ರ ಘಟನೆಯೊಂದು ಗುಜರಾತ್ ಅಹಮದಾಬಾದ್ ನಗರದಲ್ಲಿ ನಡೆದಿದೆ.
ಅಹಮದಾಬಾದ್‍ನಲ್ಲಿ ಮೇ 11ರಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿದ್ದು, ಈ ಸಂಬಂಧ ವರ ಹಾಗು ಆತನ ಕುಟುಂಬಸ್ಥರ ವಿರುದ್ಧ ಸ್ಥಳೀಯ ರಾಮೋಲ ಪೊಲೀಸ್ ಠಾಣೆಯಲ್ಲಿ ವಧು ದೂರು ದಾಖಲಿಸಿದ್ದಾರೆ.
ಅಮರಾಯಿವಾಡಿ ತಾಲೂಕಿನ ಹಬೀಬ ಶೇಠ್ ಚಾಳದ ವಾಸಿವಾಗಿರುವ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿಯೊಂದಿಗೆ, ವಸ್ತ್ರಾಲ ನಿವಾಸಿ 24 ವರ್ಷದ ಸಂಜಯ್ ಚೌಹಾಣ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯಗೊಂಡಿತ್ತು. ಎರಡು ಕುಟುಂಬಸ್ಥರು ಮೇ 11ರಂದು ಇಬ್ಬರ ಮದುವೆಯನ್ನು ನಿಶ್ಚಯಿಸಿದ್ರು. ವಧು ತಂದೆ ಅಹಮಾದಾಬಾದ್ ನಲ್ಲಿ ದೊಡ್ಡ ಮ್ಯಾರೇಜ್ ಹಾಲ್ ಸಹ ಬುಕ್ ಮಾಡಿದ್ರು.
ಮೇ 11ರಂದು ಮಂಟಪಕ್ಕೆ ವರ ಮತ್ತು ಆತನ ಕುಟುಂಬಸ್ಥರು ಆಗಮಿಸಿದ್ರು. ವರನನ್ನು ಸಹ ಅತ್ಯಂತ ಸಂಭ್ರಮದಿಂದ ವಧುವಿನ ಪೋಷಕರು ಸಹ ಸ್ವಾಗತ ಮಾಡಿಕೊಂಡಿದ್ರು. ಆದ್ರೆ ರಾತ್ರಿ ಇದ್ದಕ್ಕಿದಂತೆ ವಧು ಅನ್ಯ ಯುವಕರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾಳೆ ಹಾಗು ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತಾ ಆರೋಪಿಸಿ ವರ ಮಂಟಪದಿಂದ ಹೊರ ನಡೆದಿದ್ದಾನೆ.
ವಧು ಹೇಳೊದೇನು: ಆರತಕ್ಷತೆಯ ರಾತ್ರಿ ಊಟದ ಬಳಿಕ ನಾನು ನನ್ನ ಕೋಣೆಯಲ್ಲಿದ್ದಾಗ, ಸಂಜಯ್ ಬಂದ್ರು. ನಂತರ ನನ್ನ ಜೊತೆ ಸ್ಟೈಲ್ ಸ್ಟೈಲ್ ಆಗಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದ್ರು. ಸೆಲ್ಫಿಗೆ ನಾನು ಸಂಕೋಚ ವ್ಯಕ್ತಪಡಿಸಿದಾಗ, ನಾನು ನಿನ್ನ ಮದ್ವೆಯಾಗಲ್ಲ ಅಂತಾ ಹೊರ ಹೋದ್ರು ಅಂತಾ ದೂರಿನಲ್ಲಿ ವಧು ಉಲ್ಲೇಖಿಸಿದ್ದಾರೆ.
ಮದುವೆ ನಿಲ್ಲಿಸುವಂತೆ ವರ ಹೇಳಿದಾಗ ವಧುವಿನ ತಂದೆ ಸಮಾಧಾನ ಮಾಡಲು ಮುಂದಾದ್ರು. ಈ ವೇಳೆ ವರ ತನ್ನ ಭಾವಿ ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ವಧುವಿನ ಚಿಕ್ಕಪ್ಪ ಅಣ್ಣನ ಸಹಾಯಕ್ಕೆ ಬಂದಿದ್ದಾರೆ. ವರನಿಗೆ ಆತನ ತಂದೆ ಬುದ್ಧಿ ಹೇಳಿದ್ರೂ ಕೇಳದ ಸಂಜಯ್ ಮದುವೆ ಮಂಟಪದಿಂದ ಹೊರ ಹೋಗಿದ್ದಾನೆ.
ಘಟನೆ ಸಂಬಂಧ ವಧು ದೂರು ದಾಖಲಿಸಿದ್ದು, ಎರಡೂ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಲಾಗ್ತಿದೆ ಅಂತಾ ರಾಮೋಲ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Comments are closed.