ರಾಷ್ಟ್ರೀಯ

ನೋ ಫ್ಲೈ ಲಿಸ್ಟ್‌ನಡಿ ಮುಂಬೈನ ವ್ಯಕ್ತಿಯೊಬ್ಬರಿಗೆ ವಿಮಾನ ಹತ್ತದಂತೆ ನಿಷೇಧ!

Pinterest LinkedIn Tumblr

ಹೊಸದಿಲ್ಲಿ: ಭಾರತದಲ್ಲಿ ಕಳೆದ ವರ್ಷ ಜಾರಿಗೆ ತಂದಿರುವ ನೋ ಫ್ಲೈ ಲಿಸ್ಟ್‌ನಡಿ ಮುಂಬೈನ ವ್ಯಕ್ತಿಯೊಬ್ಬರನ್ನು ವಿಮಾನ ಹತ್ತದಂತೆ ಬ್ಯಾನ್ ಮಾಡಲಾಗಿದೆ. ಜೆಟ್ ಏರ್‌ವೇಸ್ ವಿಮಾನವನ್ನು ಕಳೆದ ವರ್ಷ ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪದಡಿ ಮುಂಬೈನ ಆಭರಣ ವ್ಯಾಪಾರಿ ನೋ ಫ್ಲೈ ಲಿಸ್ಟ್‌ನಡಿ ಬ್ಯಾನ್ ಆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ.

2017ರ ಅಕ್ಟೋಬರ್ 30ರಂದು ಮುಂಬೈನಿಂದ ದಿಲ್ಲಿಗೆ ಹೊರಟಿದ್ದ ವಿಮಾನದ ಬಿಸಿನೆಸ್ ಕ್ಲಾಸ್ ಟಾಯ್ಲೆಟ್‌ನಲ್ಲಿ ಬಿರ್ಜು ಕಿಶೋರ್ ಸಾಲ್ಲಾ ಎಂಬಾತ ಹೈಜಾಕ್ ಬೆದರಿಕೆ ಪತ್ರ ಇಟ್ಟಿದ್ದ. ಪತ್ರ ನೋಡಿದ ಬಳಿಕ ವಿಮಾನವನ್ನು ಅಹಮದಾಬಾದ್‌ಗೆ ಡೈವರ್ಟ್ ಆಗಲಾಗಿತ್ತು. ಆದರೆ, ತನಿಖೆ ಬಳಿಕ ಇದು ಸುಳ್ಳು ಬೆದರಿಕೆ ಪತ್ರ ಎಂದು ಅಧಿಕಾರಿಗಳಿಗೆ ತಿಳಿದುಬಂದಿತ್ತು. ಈ ಹಿನ್ನೆಲೆ ಬಂಗಾರದ ಉದ್ಯಮಿ ಸಾಲ್ಲಾರನ್ನು ಐದು ವರ್ಷಗಳ ಕಾಲ ಜೆಟ್‌ ಏರ್‌ವೇಸ್ ವಿಮಾನ ಹತ್ತದಂತೆ 5 ವರ್ಷಗಳ ಕಾಲ ಬ್ಯಾನ್ ಮಾಡಿದೆ.

ಭಾರತದ ವಿಮಾನಯಾನ ಸಂಸ್ಥೆಯೊಂದು ವ್ಯಕ್ತಿಯೊಬ್ಬರನ್ನು ನೋ ಫ್ಲೈ ಲಿಸ್ಟ್ ನಿಯಮದಡಿ ಬ್ಯಾನ್ ಮಾಡಿರುವ ಮೊದಲ ಪ್ರಕರಣ ಇದು. ನವೆಂಬರ್ 2017ರಂದು ಜಾರಿಗೆ ತಂದಿರುವ ನೂತನ ನಿಯಮದಡಿ ಭದ್ರತಾ ನಿಯಮ ಉಲ್ಲಂಘನೆಯ ಪ್ರಕಾರ ಇತರೆ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿ ನೀಡುವುದು ಅವರ ಹೊಣೆ. ಅಲ್ಲದೆ, ಇತರೆ ಕಂಪನಿಗಳು ಸಹ ಆ ವ್ಯಕ್ತಿಗಳನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಳ್ಳಬಹುದು. ಇಂತಹ ವ್ಯಕ್ತಿಗಳ ಡೇಟಾಬೇಸ್‌ ಅನ್ನು ನಾವು ಇನ್ನು ಮುಂದೆಯೂ ಇಟ್ಟುಕೊಳ್ಳುತ್ತೇವೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಸ ನಿಯಮದ ಮೂರನೇ ಹಾಗೂ ಅತಿ ಹೆಚ್ಚು ಶಿಕ್ಷೆಯ ಹಂತದಡಿ ಸಾಲ್ಲಾನನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಈ ಹಂತದಡಿ ಏರ್‌ಕ್ರಾಫ್ಟ್‌ ವ್ಯವಸ್ಥೆಗೆ ಧಕ್ಕೆ ತರುವುದು, ಗಂಭೀರ ದೈಹಿಕ ಹಿಂಸೆ ನೀಡುವುದು ಸೇರಿದಂತೆ ಗಂಭೀರ ಪ್ರಕರಣಗಳಡಿ 2 ವರ್ಷದಿಂದ ಜೀವನಪರ್ಯಂತ ವಿಮಾನದಿಂದ ಬ್ಯಾನ್ ಮಾಡಬಹುದಾಗಿದೆ. ಅಕ್ಟೋಬರ್ 30, 2017ರಂದು ಮುಂಬೈ – ದಿಲ್ಲಿ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದ ವ್ಯಾಪಾರಿ, ವಿಮಾನದಲ್ಲಿ ಹೈಜಾಕರ್‌ಗಳು ಇದ್ದಾರೆ. ಇದನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿಮಾನವನ್ನು ಹಾರಿಸಬೇಕು ಎಂದು ಬೆದರಿಕೆ ಪತ್ರ ಬರೆದಿದ್ದ. ಬಳಿಕ, ವಿಮಾನವನ್ನು ಅಹಮದಾಬಾದ್‌ಗೆ ಡೈವರ್ಟ್ ಮಾಡಿ ಲ್ಯಾಂಡ್ ಮಾಡಲಾಗಿತ್ತು. ಅಲ್ಲದೆ, ತೀವ್ರ ತಪಾಸಣೆ ಬಳಿಕ ಇದು ಸುಳ್ಳು ಬೆದರಿಕೆ ಎಂಬುದು ಸಾಬೀತಾಗಿತ್ತು.

Comments are closed.