ರಾಷ್ಟ್ರೀಯ

ಕೇರಳದಲ್ಲಿ ಮಾರಣಾಂತಿಕ ನಿಪಾಹ್ ವೈರಸ್ ಪ್ರಕರಣ ಪತ್ತೆ: ಇದು ಹೇಗೆ ಪಸರಿಸುತ್ತದೆ?

Pinterest LinkedIn Tumblr


ಕೋಝಿಕೋಡ್(ಕೇರಳ): ಕಳೆದ ಕೆಲವು ದಿನಗಳಿಂದ ಕೋಝಿಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಕಾಣಿಸಿಕೊಂಡ ವಿರಳ ಹಾಗೂ ಮಾರಣಾಂತಿಕ ನಿಪಾಹ್ ವೈರಸ್ ಸೋಂಕಿಗೆ ಸೋಮವಾರ ಇಬ್ಬರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಕುಟುಂಬವೊಂದರ ಇಬ್ಬರು ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ನಿಪಾಹ್ ವೈರಸ್ ಇರುವುದು ಪತ್ತೆಯಾಗುವ ಮೂಲಕ ಈ ಮಾರಣಾಂತಿಕ ವೈರಸ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ನಿಫಾ ವೈರಸ್ ಗೆ ತುತ್ತಾಗಿದ್ದ ನರ್ಸ್ ವೊಬ್ಬರು ಕೂಡಾ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಶವದ ಅಂತ್ಯಕ್ರಿಯೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಕೇರಳದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಹೈಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಉನ್ನತ ಅಧಿಕಾರಿಗಳ ತಂಡ ಸೋಮವಾರ ಕೇರಳಕ್ಕೆ ಆಗಮಿಸಲಿದ್ದು, ಸೋಂಕು ವರದಿಯಾದ ಊರಿನಲ್ಲಿ ಪರಿಶೀಲನೆ ನಡೆಸಲಿದೆ ಎಂದು ವರದಿ ಹೇಳಿದೆ.

ಈ ರೋಗ ಲಕ್ಷಣವೇನು? ಹೇಗೆ ಹರಡುತ್ತೆ?

ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ನಿಪಾಹ್ ವೈರಸ್ ಅತ್ಯಧಿಕ ವೇಗವಾಗಿ ಹರಡುವ ರೋಗಾಣುವಾಗಿದೆ. ಈ ನಿಪಾಹ್ ವೈರಸ್ ಬಾವಲಿ, ಹಂದಿ ಹಾಗೂ ಇನ್ನಿತರ ಪ್ರಾಣಿಗಳಿಂದ ಹರಡುತ್ತದೆ.

ವೈರಸ್ ಲಕ್ಷಣ;

ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಈ ವೈರಸ್ ನ ಲಕ್ಷಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಸದಾನಂದನ್ ತಿಳಿಸಿದ್ದಾರೆ.

Comments are closed.