ರಾಷ್ಟ್ರೀಯ

ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿ ಡಿಸೆಂಬರ್‌ ಮುಚ್ಚುಗಡೆ!

Pinterest LinkedIn Tumblr


ಗುವಾಹಟಿ: ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯನ್ನು ಡಿಸೆಂಬರ್‌ನಲ್ಲಿ ಮುಚ್ಚಲಾಗುತ್ತದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ತಿಳಿಸಿದ್ದಾರೆ.

ಗಡಿಭಾಗದಲ್ಲಿ ಅಕ್ರಮ ಚಟುವಟಿಕೆ, ಕಳ್ಳಸಾಗಣೆ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ನದಿ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಮತ್ತು ಭೂ ಪ್ರದೇಶದಲ್ಲಿ ಸ್ಮಾರ್ಟ್ ಬೇಲಿ ತಂತ್ರಜ್ಞಾನದ ಮೂಲಕ ಗಡಿ ಮುಚ್ಚಲಾಗುತ್ತದೆ ಎಂದು ಅಸ್ಸಾಂ ಸರಕಾರ ಹೇಳಿದೆ.

ಗಡಿಯನ್ನು ಮುಚ್ಚುವುದರಿಂದ ಅಕ್ರಮ ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ನಿಯಂತ್ರಣ ಸಾಧ್ಯವಾಗಲಿದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸೋನೊವಾಲ್ ಹೇಳಿದ್ದಾರೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಅಕ್ರಮ ವಲಸಿಗರು ಗಡಿ ಮೂಲಕ ಒಳನುಸುಳುತ್ತಿರುವುದು ಮತ್ತು ಕಳ್ಳಸಾಗಣೆ ನಡೆಸುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು, ಅದಕ್ಕೆ ತಡೆಬೀಳಲಿದೆ.

Comments are closed.