ರಾಷ್ಟ್ರೀಯ

ಹಾವು ಕಚ್ಚಿದ ಅರಿವಿಲ್ಲದೆ ಮಗುವಿಗೆ ಎದೆ ಹಾಲುಣಿಸಿದ ಪರಿಣಾಮ ತಾಯಿ-ಮಗು ಸಾವು

Pinterest LinkedIn Tumblr


ಲಕ್ನೋ: ಹಾವು ಕಚ್ಚಿದ ಅರಿವಿಲ್ಲದೆ ತಾಯಿಯೊಬ್ಬರು ತನ್ನ 2 ವರ್ಷದ ಮಗುವಿಗೆ ಹಾಲುಣಿಸಿದ ಪರಿಣಾಮ ತಾಯಿ ಜತೆ ಮಗುವು ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮಂಡ್ಲಾ ಗ್ರಾಮದಲ್ಲಿ ನಡೆದಿದೆ.

ಗುರುವಾರ ಬೆಳಗಿನಜಾವ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಪರವೀಣ್ (25) ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಮಲಗಿದ್ದ ಮಹಿಳೆಗೆ ಹಾವು ಕಚ್ಚಿದೆ. ಆದರೆ, ನಿದ್ರೆಯ ಮಂಪರಿನಲ್ಲಿದ್ದ ಆಕೆಗದು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಕೆಯ ಪಕ್ಕದಲ್ಲಿ ಮಲಗಿದ್ದ ಮಗು ಹಸಿವೆಯಿಂದ ಅತ್ತಿದ್ದು, ಎದ್ದು ಕುಳಿತುಕೊಂಡ ಆಕೆ ಎದೆ ಹಾಲು ಕುಡಿಸಿದ್ದಾಳೆ.

ಅದಾಗಲೇ ಆಕೆಯ ದೇಹಕ್ಕೆ ಹಾವಿನ ವಿಷ ಪಸರಿಸಿದ್ದು ಹಾಲಿನ ಮೂಲಕ ಮಗುವಿನ ದೇಹ ಸೇರಿದೆ.

ಮಗು ಹಾಲು ಕುಡಿದ ಸ್ಪಲ್ಪ ಸಮಯದಲ್ಲೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದು, ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.