ರಾಷ್ಟ್ರೀಯ

ವಿಮಾನ ಹಾರಾಟ ಪರವಾನಿಗೆ ಪಡೆಯುವಲ್ಲಿ ನಿಯಮ ಉಲ್ಲಂಘಿಸಿದ ಆರೋಪ; ಏರ್‌ ಏಷ್ಯಾ ಸಿಇಒ ಟೋನಿ ಫೆರ್ನಾಂಡಿಸ್‌ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

Pinterest LinkedIn Tumblr

ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಪರವಾನಿಗೆ ಪಡೆಯುವಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಆರೋಪದ ಮೇಲೆ ಏರ್‌ ಏಷ್ಯಾ ಗ್ರೂಪ್ ಸಿಇಒ ಟೋನಿ ಫೆರ್ನಾಂಡಿಸ್‌ ಹಾಗೂ ಇತರರ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ನಿರ್ದೇಶಕರು, ಅಂತಾರಾಷ್ಟ್ರೀಯ ಪರವಾನಗಿ ಪಡೆಯುವುದಕ್ಕಾಗಿ ವಾಯುಯಾನದ 5/20 ನಿಯಮ ಮತ್ತು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಬಿಐ, ಟೋನಿ ಫೆರ್ನಾಂಡಿಸ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದೆ.

ಫೆರ್ನಾಂಡಿಸ್‌ ಅವರು ಅಂತರಾಷ್ಟ್ರೀಯ ಹಾರಾಟ ಪರವಾನಗಿ ಪಡೆಯುವುದಕ್ಕಾಗಿ ಸರ್ಕಾರಿ ಅಧಿಕಾರಿಗಳೊಂದಿಗೆ ಲಾಭಿ ನಡೆಸಿದ್ದಾರೆ ಎಂದು ಸಿಬಿಐ ದೂರಿದೆ.

5/20ರ ನಿಮಯವೆಂದರೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಲೈಸನ್ಸ್‌ ಪಡೆಯ ಬಯಸುವ ಕಂಪೆನಿಯು ಐದು ವರ್ಷದ ಅನುಭವ ಹೊಂದಿರಬೇಕು ಮತ್ತು ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು ಎಂಬುದಾಗಿದೆ.

Comments are closed.