ರಾಷ್ಟ್ರೀಯ

14 ವರ್ಷದ ಬಾಲಕನ ಜೊತೆ ಸೆಕ್ಸ್ ಮಾಡುತ್ತಿದ್ದ ವೇಳೆ ಮಗನಿಗೆ ಸಿಕ್ಕಿಬಿದ್ದ ತಾಯಿ ! ಪುಟ್ಟ ಮಗನನ್ನು ಏನು ಮಾಡಿದ್ಲು ಗೊತ್ತೇ ?

Pinterest LinkedIn Tumblr

ಕೋಲ್ಕತ: 14 ವರ್ಷದ ಪ್ರಿಯಕರನೊಂದಿಗೆ ಚೆಲ್ಲಾಟವಾಡಿದ್ದನ್ನು ನೋಡಿದ 7 ವರ್ಷದ ಬಾಲಕನ್ನು, ತಾಯಿಯೇ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕೋಲ್ಕತದ ರಾಜಪುರ ಗ್ರಾಮದಲ್ಲಿ ನಡೆದಿದೆ.

ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ 28 ವರ್ಷದ ಸಾಗರಿ 14 ವರ್ಷದ ಬಾಲಕ ರಿಶಿ ಜತೆ ಚೆಲ್ಲಾಟವಾಡಿದ್ದಾಳೆ. ಮಗ ಸಾಧನ್‌ ಅಮ್ಮನನ್ನು ರಿಷಿ ಜತೆ ಮಲಗಿರುವುದನ್ನು ಕಂಡು, ತಂದೆ ಬಳಿ ಹೇಳುತ್ತೇನೆ ಎಂದಿದ್ದಾನೆ. ಕೂಡಲೇ ಸಾಧನ್‌ನ ಮೇಲೆರಗಿದ ಇಬ್ಬರೂ ಹುಡುಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟಿದ್ದಾರೆ. 4 ದಿನ ಬಳಿಕ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

ಕಾಣೆಯಾದ ಕಥೆ:
ಗೋಸ್ತೋ ಮೊಂಡಲ್‌ ಮತ್ತು ಸಾಗರಿ ರಾಜಪುರದಲ್ಲಿ ವಾಸಿಸುತ್ತಿದ್ದಾರೆ. ನೆರೆ ಮನೆಯಲ್ಲಿ ಸಚ್ಚಿದಾನಂದ ಸರ್ದಾರ್‌, ಅವರ ಪತ್ನಿ, ಇಬ್ಬರು ಪುತ್ರರಾದ ರಿಷಿ ಮತ್ತು ಆನಂದ್‌ ಜತೆ ವಾಸವಿದ್ದಾರೆ. ರಿಷಿ ಹಾಗೂ ಸಾಗರಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರು.

ಮೇ 24ರಂದು ಗೋಸ್ತೋ ಮೊಂದಲ್‌ ಎಂದಿನಂತೆ ಕೆಲಸಕ್ಕೆ ತೆರಳಿದ್ದಾನೆ. ಸಾಗರಿ ರಿಷಿ ಜತೆ ಸಮಯ ಕಳೆದಿದ್ದಾಳೆ. ಅಮ್ಮ, ಪಕ್ಕದ ಮನೆಯ ರಿಷಿ ಜತೆ ಅನ್ಯೋನ್ಯವಾಗಿರುವುದನ್ನು ಸಾಧನ್‌ ನೋಡಿದ್ದಾನೆ. ವಿಷಯ ಬಯಲಿಗೆ ಬಂದರೆ ಕಷ್ಟವಾಗುತ್ತದೆ ಎಂದು ಇಬ್ಬರೂ ಸೇರಿ ಸಾಧನ್‌ನ್ನು ಕೊಲೆ ಮಾಡಿದ್ದಾರೆ. ಬಳಿಕ ಸಾಗರಿ ಸಾಧನ್‌ ಕಾಣೆಯಾಗಿರುವ ನಾಟಕವಾಡಿದ್ದಾಳೆ.

ಬಾಲಕ ಕಾಣೆಯಾಗಿರುವ ಬಗ್ಗೆ ಗೋಸ್ತೋ ಪೊಲೀಸ್‌ ದೂರು ನೀಡಿದ್ದಾರೆ. 3 ದಿನಗಳ ಕಾಲ ಸತ್ಯ ಮುಚ್ಚಿಟ್ಟ ಸಾಗರಿಯ ಮೇಲೆ ಅನುಮಾನಗೊಂಡ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಸತ್ಯ ಘಟನೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.