ರಾಷ್ಟ್ರೀಯ

20 ಕೋಟಿ ದೇಶದ ವಾಟ್ಸಪ್ ಬಳಕೆದಾರರಿಗೆ ಡಿಜಿಟಲ್ ಪೇಮೆಂಟ್ ಸೇವೆ!

Pinterest LinkedIn Tumblr


ಹೊಸದಿಲ್ಲಿ: ಫೇಸ್‌ಬುಕ್ ಅಧೀನತೆಯಲ್ಲಿರುವ ವಾಟ್ಸಪ್, ಭಾರತದಲ್ಲಿ ತನ್ನೆಲ್ಲ 20 ಕೋಟಿ ಬಳಕೆದಾರರಿಗೆ ಡಿಜಿಟಲ್ ಪೇಮೆಂಟ್ ಸೇವೆಯನ್ನು ವಿಸ್ತರಿಸುವ ಯೋಜನೆಯಿರಿಸಿಕೊಂಡಿದೆ.

ತ್ವರಿತ ಗತಿಯಲ್ಲಿ ಸಂದೇಶ ಸೇವೆ ನೀಡುತ್ತಿರುವ ವಾಟ್ಸಪ್ ಅಪ್ಲಿಕೇಷನ್ ಇದೀಗ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೂ ಲಗ್ಗೆಯಿಡುತ್ತಿದೆ. ನಾಲ್ಕು ಪ್ರಮುಖ ಬ್ಯಾಂಕ್‌ಗಳ ಜತೆಗಿನ ಹೊಂದಾಣಿಕೆ ಮೂಲಕ ವಾಟ್ಸಪ್ ಪೇಮೆಂಟ್ ಸೇವೆಯನ್ನು ಆರಂಭಿಸಲಿದೆ.

ಇದಕ್ಕಾಗಿ ದೇಶದ ಮುಂಚೂಣಿಯ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಕೈಜೋಡಿಸಲಾಗಿದೆ. ಈ ಪೈಕಿ ಅಗತ್ಯ ವ್ಯವಸ್ಥೆಯನ್ನು ಹೊಂದಿದ ಬಳಿಕವಷ್ಟೇ ಎಸ್‌ಬಿಐ ಸೇರ್ಪಡೆಯಾಗಲಿದೆ.

ಆದರೆ ಪ್ರತಿಸ್ಪರ್ಧಿಗಳು ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವುದರಿಂದ ಎಚ್ಚರಿಕೆಯನ್ನು ಮನಗಂಡಿರುವ ವಾಟ್ಸಪ್, ಮೂರು ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಮುಂದಿನ ವಾರದಿಂದಲೇ ಡಿಜಿಟಲ್ ಪೇಮೆಂಟ್ ಸೇವೆ ಆರಂಭಿಸಲು ಗುರಿಯಿರಿಸಿದೆ.

ಪ್ರಾಯೋಗಿಕ ಹಂತವಾಗಿ ಫೆಬ್ರವರಿ ತಿಂಗಳಲ್ಲಿ 10 ಲಕ್ಷ ಬಳಕೆದಾರರಿಗೆ ವಾಟ್ಸಪ್ ಸೇವೆಯನ್ನು ಆರಂಭಿಸಲಾಗಿದೆ. ಈ ಮೂಲಕ ಗೂಗಲ್ ತೇಜ್ ಹಾಗೂ ಅಲಿಬಾಬಾ ಒಡೆತನದ ಪೇಮೆಂಟ್ ಸೇವೆಗಳಿಗೆ ಸೆಡ್ಡು ನೀಡಲಿದೆ.

ದೇಶದಲ್ಲಿ ಮಾಸಿಕವಾಗಿ 20 ಕೋಟಿ ಸಕ್ರಿಯ ಬಳಕೆದಾರರನ್ನು ವಾಟ್ಸಪ್‌ ಹೊಂದಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

Comments are closed.