ನವದೆಹಲಿ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು 2017-18 ನೇ ಸಾಲಿನಲ್ಲಿ ಗಂಟೆಗೆ 9 ಕೋಟಿ ನಷ್ಟ ಹೊಂದುತ್ತಿರುವ ಬಗ್ಗೆ ಆರ್’ಬಿಐ ಕಳವಳ ವ್ಯಕ್ತಪಡಿಸಿದೆ.
ವಸೂಲಾಗದ ಸಾಲದಿಂದ ನಿತ್ಯ 217 ಕೋಟಿ ರೂ. ನಷ್ಟವಾಗುತ್ತಿದ್ದು 8.6 ಲಕ್ಷ ಕೋಟಿಯಷ್ಟ ಸಾಲವನ್ನು ಬಾಕಿಯುಳಿಸಿಕೊಂಡಿವೆ.
ಅತೀ ಹೆಚ್ಚು ಸಾಲ ಬಾಕಿಯುಳಿಸಿಕೊಂಡ ಬ್ಯಾಂಕ್’ಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲ ಸ್ಥಾನದಲ್ಲಿದ್ದರೆ ಐಡಿಬಿಐ, ಎಸ್’ಬಿಐ, ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್’ಗಳು ನಂತರದ ಸ್ಥಾನದಲ್ಲಿವೆ.
ಕರ್ನಾಟಕ ಮೂಲದ ವಿಜಯಾ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದ್ದು ಲಾಭ ಗಳಿಸಿದ ಬ್ಯಾಂಕ್’ಗಳಾಗಿವೆ. ಕಳೆದ ವರ್ಷ ಕೇಂದ್ರ ಸರ್ಕಾರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ 2.11 ಲಕ್ಷ ಕೋಟಿ ಬಂಡವಾಳ ಪುನರಾವರ್ತಿತವಾಗುವ ಪ್ಯಾಕೇಜ್ ಘೋಷಿಸಿತ್ತು.
ರಾಷ್ಟ್ರೀಯ
Comments are closed.