ರಾಷ್ಟ್ರೀಯ

ಪೆಟ್ರೋಲ್‌, ಡೀಸಿಲ್‌ ದರ ಈಚೆಗೆ ಏರಿರುವುದರ ಆಕ್ರೋಶಕ್ಕೆ ಬಿಜೆಪಿ ಸೋಲು: ಜೆಡಿಯು

Pinterest LinkedIn Tumblr


ಪಟ್ನಾ: ನಾಲ್ಕು ಲೋಕಸಭೆಮತ್ತು ಹತ್ತು ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳ ಸಂಘಟಿತ ಶಕ್ತಿಯ ಎದುರು ಬಿಜೆಪಿ ನೆಲ ಕಚ್ಚಲು ಕಾರಣವೇ ನಿರಂತರವಾಗಿ ಏರುತ್ತಿರುವ ಪೆಟ್ರೋಲ್‌, ಡೀಸಿಲ್‌ ಬೆಲೆ ಎಂದು ಎನ್‌ಡಿಎ ಕೂಟದ ಮಿತ್ರ ಪಕ್ಷವಾಗಿರುವ ಜೆಡಿಯು ಆರೋಪಿಸಿದೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಜೆಡಿಯು ಹಿರಿಯ ನಾಯಕ ಕೆ ಸಿ ತ್ಯಾಗಿ ಅವರು “ಪೆಟ್ರೋಲ್‌, ಡೀಸಿಲ್‌ ದರಗಳು ಈಚೆಗೆ ನಿರಂತರವಾಗಿ ಏರಿರುವುದಕ್ಕೆ ರಾಷ್ಟ್ರ ವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಉಪ ಚುನಾವಣೆಗಳಲ್ಲಿ ಬಿಜೆಪಿ ನೆಲ ಕಚ್ಚಲು ಅದುವೇ ಮುಖ್ಯ ಕಾರಣವಾಗಿದೆ. ಆದುದರಿಂದ ಕೇಂದ್ರದಲ್ಲಿರುವ ಮೋದಿ ಸರಕಾರ ಈ ಕೂಡಲೇ ಏರಿದ ಇಂಧನ ಬೆಲೆಗಳನ್ನು ಹಿಂಪಡೆಯಬೇಕು’ ಎಂದು ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಒಳಗೊಂಡ ಮಹಾ ಘಟಬಂಧನವನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕದಲ್ಲಿ ನಡೆದಿರುವ ಈ ಉಪ ಚುನಾವಣೆಯಲ್ಲಿ ಆರ್‌ ಜೆ ಡಿ ಅಭ್ಯರ್ಥಿ ಶಹನವಾಜ್‌ ಆಲಂ (ಇವರು ಸರ್‌ಫ‌ರಾಜ್‌ ಆಲಂ ಸಹೋದರ) ಅವರು ಜೆಡಿಯು ಅಭ್ಯರ್ಥಿಯನ್ನು ಸೋಲಿಸಿರುವ ಈ ಸಂದರ್ಭದಲ್ಲಿ ಜೆಡಿಯು, ಬಿಜೆಪಿ ವಿರುದ್ಧ ಈ ಪ್ರತಿಕ್ರಿಯೆ ನೀಡಿದೆ.

Comments are closed.