ಹೊಸದಿಲ್ಲಿ: ಜನಪ್ರಿಯ ಮೆಸೆಜೀಂಗ್ ಫ್ಲ್ಯಾಟ್‌ಫಾರ್ಮ್ ವಾಟ್ಸಪ್‌ಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿರುವ ‘ಕಿಂಬೋ’ ಸ್ವದೇಶಿ ಆ್ಯಪ್ ಬಿಡುಗಡೆಯಾದ ಒಂದು ದಿನದೊಳಗೆ ಕಣ್ಮರೆಯಾಗಿದೆ.
ಕಳೆದ ದಿನ ಯೋಗಗುರು ಬಾಬಾ ರಾಮ್‌ದೇವ್ ಅವರ ಒಡೆತನದ ಪತಂಜಲಿ ಸಂಸ್ಥೆಯು ಅತಿ ನೂತನ ಕಿಂಬೋ ಸ್ವದೇಶಿ ಮೆಸೇಜಿಂಗ್ ಸೇವೆಯನ್ನು ಆರಂಭಿಸಿತ್ತು. ಆದರೆ ಕಿಂಬೋ ಬಿಡುಗಡೆಯಾಗಿರುವ 24 ತಾಸಿನೊಳಗೆ ಗೂಗಲ್ ಪ್ಲೇ-ಸ್ಟೋರ್‌ನಿಂದ ಕಣ್ಮರೆಯಾಗಿದೆ. ಇದರಿಂದ ಬಳಕೆದಾರರು ತಬ್ಬಿಬ್ಬಾಗಿದ್ದಾರೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಿಂಬೋ ಸರ್ಚ್ ಮಾಡಿದರೆ “ಕ್ಷಮಿಸಿ, ವಿನಂತಿಸಿರುವ URL ಈ ಸರ್ವರ್‌ನಲ್ಲಿ ಕಂಡುಬಂದಿಲ್ಲ” ಎಂಬ ಸಂದೇಶ ಕಂಡುಬರುತ್ತಿದೆ. ಇನ್ನೊಂದೆಡೆ ಭಾರಿ ಟ್ರಾಫಿಕ್ ಹರಿವನ್ನು ತಡೆಯಲಾಗದೆ ಕಿಂಬೋ ಅಧಿಕೃತ ವೆಬ್‌ಸೈಟ್ ಸಹ ಕ್ರಾಶ್ ಆಗಿದೆ.
ಒಟ್ಟಿನಲ್ಲಿ ದೇಶದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ಗೆ ಸೆಡ್ಡು ನೀಡಲು ಮುಂದಾಗಿರುವ ಪತಂಜಲಿ, ತನ್ನ ಮೊದಲ ಹೆಜ್ಜೆಯಲ್ಲೇ ಎಡವಿ ಬಿದ್ದಿದೆ. ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ನಿಯಂತ್ರಿಸಲು ಬೇಕಾದಷ್ಟು ಸರ್ವರ್ ವ್ಯವಸ್ಥೆಯನ್ನು ಮಾಡದಿರುವುದು ಹಿನ್ನಡೆಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತ ಸಂಚಾರ ನಿಗಮ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಪತಂಜಲಿ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಪರಿಚಯಿಸಿತ್ತು. ಇದಾದ ಬೆನ್ನಲ್ಲೇ ‘ಕಿಂಬೋ’ ಹೆಸರಿನ ಅತಿ ನೂತನ ಸ್ವದೇಶಿ ಮೆಸೆಜೀಂಗ್ ಫ್ಲ್ಯಾಟ್‌ಫಾರ್ಮ್‌ಗೆ ಕಾಲಿರಿಸಿತ್ತು.
ಕಿಂಬೋ
ಕಿಂಬೋ ಬಿಡುಗಡೆಯಾದ ಕೆಲವೇ ತಾಸಿನಲ್ಲಿ 10,000ಕ್ಕೂ ಹೆಚ್ಚು ಬಳಕೆದಾರರನ್ನು ಪಡೆದಿತ್ತು. ಆದರೆ ಪ್ರಸ್ತುತ ಕ್ರಾಶ್ ಆಗಿರುವುದು ಕಿಂಬೋ ಎಷ್ಟು ಸುರಕ್ಷಿತ ಎಂಬುದರ ಬಗ್ಗೆಯೂ ಬಳಕೆದಾರರಲ್ಲಿ ಅನುಮಾನಕ್ಕೀಡು ಮಾಡಿದೆ.
Comments are closed.