ನವದೆಹಲಿ: ಇಂಧನ ಬೆಲೆ ಏರಿಕೆಯಾದ ಬೆನ್ನಲ್ಲೇ ಗೃಹಪಯೋಗಿ ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ.
ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ರು. 2.34 ಪೈಸೆ ಏರಿಕೆಯಾಗಿದ್ದು ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ48 ರುಪಾಯಿಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ (ಪರಿಷ್ಕೃತ ದರ) ರು. 493,55 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರು..698.50 ಆಗಿದೆ.
ಇನ್ನುಳಿದಂತೆ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ ಕೊಲ್ಕತ್ತಾದಲ್ಲಿ ರು,496, 65, ಮುಂಬೈನಲ್ಲಿ ರು.491,31 ಮತ್ತು ಚೆನ್ನೈನಲ್ಲಿ ರು.481. 84 ಆಗಿದೆ.
ಏತನ್ಮಧ್ಯೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಕ್ರಮವಾಗಿ ಕೊಲ್ಕತ್ತಾದಲ್ಲಿ 723.50, ಮುಂಬೈನಲ್ಲಿ 671.50 ಮತ್ತು ಚೆನ್ನೈನಲ್ಲಿ 721.50 ರು. ಏರಿಕೆಯಾಗಿದೆ.
Comments are closed.