ರಾಷ್ಟ್ರೀಯ

20ಕ್ಕೂ ಹೆಚ್ಚು ಜೆಇಎಂ ಭಯೋತ್ಪಾದಕರು ಕಾಶ್ಮೀರ ಕಣಿವೆಗೆ ನುಸುಳುವಿಕೆ: ಗುಪ್ತಚರ ಮಾಹಿತಿ

Pinterest LinkedIn Tumblr


ಶ್ರೀನಗರ : ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರೀ ಸಂಖ್ಯೆಯ ಜೈಶ್‌ ಎ ಮೊಹಮ್ಮದ್‌ ಉಗ್ರರು ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಇಪ್ಪತ್ತಕ್ಕೂ ಅಧಿಕ ಉಗ್ರರು ಪಿಓಕೆ ಯಿಂದ ಎಲ್‌ಓಸಿ ದಾಟಿ ಕಾಶ್ಮೀರಕ್ಕೆ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಉಗ್ರರಲ್ಲಿ ಹೆಚ್ಚಿನವರು ಮೌಲಾನಾ ಮಸೂದ್‌ ಅಜರ್‌ ನೇತೃತ್ವದ ಜೆಇಎಂ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದವರು ತಿಳಿಸಿದ್ದಾರೆ.

ಜೆಇಎಂ ಉಗ್ರರು ಕಾಶ್ಮೀರ ಕಣಿವೆ ಪ್ರವೇಶಿಸಿರುವ ಕಾರಣ ಈಗಿನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆಳು ತಾರಕಕ್ಕೇರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

ಪಿಓಕೆ ಯಿಂದ ದೊಡ್ಡ ಸಂಖ್ಯೆಯಲ್ಲಿ ಜೆಇಎಂ ಒಂದೇ ಬಾರಿ ಎಲ್‌ಓಸಿ ದಾಟಿ ಕಾಶ್ಮೀರ ಕಣಿವೆ ಪ್ರವೇಶಿಸಿರುವುದು ಅಪರೂಪದ ಘಟನೆಯಾಗಿದೆ ಎಂದವರು ಹೇಳಿದ್ದಾರೆ.

Comments are closed.