ರಾಷ್ಟ್ರೀಯ

ಕೇರಳ ಹೈಕೋರ್ಟ್ ನಿಂದ ಲಿವಿಂಗ್ ಟುಗೆದರ್‌ಗೆ ಸಮ್ಮತಿ!

Pinterest LinkedIn Tumblr


ಕೊಚ್ಚಿ: ಮದುವೆಗೆ ಹೊರತಾದ ಲಿವ್‌ ಇನ್‌ ರಿಲೇಷನ್‌ಶಿಪ್‌ ನೆಚ್ಚಿ ಜೊತೆಯಾಗಿರುವ 18 ವರ್ಷದ ಯುವಕ ಮತ್ತು 19 ವರ್ಷದ ಯುವತಿಯನ್ನು ಬೇರ್ಪಡಿಸಲು ಕೇರಳ ಹೈಕೋರ್ಟ್‌ ಸ್ಪಷ್ಟ ನಿರಾಕರಣೆ ತೋರಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ ಚಿತಂಬರೇಶ್‌ ಮತ್ತು ಕೆ.ಪಿ.ಜ್ಯೋತೀರ್ನಾಥ್‌ ಒಳಗೊಂಡ ವಿಭಾಗೀಯ ಪೀಠ, ಇಂತಹ ಸಂಬಂಧ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಇದಕ್ಕೆ ನಾವು ಕುರುಡಾಗಲು ಸಾಧ್ಯವಿಲ್ಲ ಎಂದಿದೆ.

ಇತ್ತೀಚೆಗೆ ತನ್ನ ಮದುವೆ ಸಂಬಂಧವನ್ನು ಕಡಿದುಕೊಂಡ ಕೇರಳದ 20 ವರ್ಷದ ಮಹಿಳೆಗೆ ಇಚ್ಛಿಸಿದ ಸಂಗಾತಿ ಜತೆ ಬದುಕಲು ಸುಪ್ರೀಂ ಕೋರ್ಟ್‌ ಅನುವು ಮಾಡಿಕೊಟ್ಟಿತ್ತು. ಆ ವೇಳೆ, ಪ್ರಾಪ್ತ ವಯಸ್ಸಿನ ಗಂಡು-ಹೆಣ್ಣು ತಾವು ಬಯಸಿದವರ ಜತೆ ಮದುವೆಯಾಗದೆಯೇ ಜೊತೆಗೂಡಿ ಇರಲು ಯಾವುದೇ ಕಾನೂನಿನ ಅಡ್ಡಿಯಿಲ್ಲ ಎಂದೂ ಸುಪ್ರೀಂ ಸ್ಪಷ್ಟಪಡಿಸಿತ್ತು. ಈ ತೀರ್ಪನ್ನೂ ಉಲ್ಲೇಖಿಸಿರುವ ಕೇರಳ ಹೈಕೋರ್ಟ್‌, ಯುವತಿಯ ತಂದೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಳ್ಳಿಹಾಕಿತು.

ತನ್ನ ಮಗಳು ಯುವಕನ ಅಕ್ರಮ ಬಂಧನದಲ್ಲಿದ್ದಾಳೆ ಎಂದು ಯುವತಿಯ ತಂದೆ ಅರ್ಜಿಯಲ್ಲಿ ದೂರಿದ್ದರು. ಲಿವ್‌ ಇನ್‌ ಸಂಬಂಧದಲ್ಲಿರುವ ಯುವಕ-ಯುವತಿ ಇಬ್ಬರೂ ಅಳಪ್ಪುಳ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಸೇರಿದವರು.

Comments are closed.