ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ) ಸೋಮವಾರ ಪ್ರಕಟಿಸಿದೆ.
ಬಿಹಾರದ ಕಲ್ಪನಾ ಕುಮಾರಿ 2018ರ ನೀಟ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 720 ಅಂಕಗಳಿಗೆ 691 ಅಂಕ ಪಡೆದಿದ್ದಾರೆ. ಭೌತಶಾಸ್ತ್ರದಲ್ಲಿ 171(180ಕ್ಕೆ), ರಸಾಯನಶಾಸ್ತ್ರದಲ್ಲಿ 160 ಹಾಗೂ ಜೀವಶಾಸ್ತ್ರದಲ್ಲಿ 360(360ಕ್ಕೆ) ಅಂಕ ಪಡೆಯುವ ಮೂಲಕ ನೀಟ್ ಬರೆದಿದ್ದ 13 ಲಕ್ಷ ವಿದ್ಯಾರ್ಥಿಗಳ ಪೈಕಿ ಕಲ್ಪನಾ ಮೊದಲ ಸ್ಥಾನ ಗಳಿಸಿದ್ದಾರೆ.
ಸಾಮಾನ್ಯ ವರ್ಗದಲ್ಲಿ 2,68,316 ವಿದ್ಯಾರ್ಥಿಗಳು, ಒಬಿಸಿಯಲ್ಲಿ 3,27,575; 87,311 ಎಸ್‌ಸಿ ಹಾಗೂ ಎಸ್‌ಟಿ ವರ್ಗದಲ್ಲಿ 31,360 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕಟ್‌ಆಫ್ ಅಂಕ 691–119, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ 118–96 ಅಂಕ ನಿಗದಿಯಾಗಿದೆ. 691-119 ಕಟ್‌ಆಫ್‌ನಲ್ಲಿ ಒಟ್ಟು 6,34,897 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.
Comments are closed.