ನವದೆಹಲಿ: ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾಗಲು ನಾಗ್ಪುರಕ್ಕೆ ತೆರಳಿರುವುದು ಸದ್ಯಕ್ಕೆ ದೇಶಾದ್ಯಂತ ಚರ್ಚೆಯಾಗುತ್ತಿರುವ ಸುದ್ದಿ. ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಹೋಗದಂತೆ ಹಲವು ಕಾಂಗ್ರೆಸ್ಸಿಗರು ಪ್ರಣಬ್ ಮುಖರ್ಜಿಗೆ ಮನವಿ ಮಾಡಿದ್ದರು. ಈಗ ಕಾಂಗ್ರೆಸ್ ನಾಯಕಿಯೂ ಆಗಿರುವ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಂದೆಯ ನಿರ್ಧಾರದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರ ಸುಳ್ಳು ಕಥೆಗಳನ್ನು ಹರಡುವುದಕ್ಕೆ ಪ್ರಣಬ್ ಮುಖರ್ಜಿ ಅತ್ಯುತ್ತಮ ಅವಕಾಶ ಒದಗಿಸುತ್ತಿದ್ದಾರೆ, ಅವರ ಭಾಷಣವನ್ನು ಮರೆಯಲಾಗುತ್ತದೆ, ಆದರೆ ದೃಶ್ಯಗಳು ಮಾತ್ರ ಉಳಿಯುತ್ತವೆ ಎಂದು ಶರ್ಮಿಷ್ಟಾ ಮುಖರ್ಜಿ ಹೇಳಿದ್ದಾರೆ.
ತಮ್ಮ ತಂದೆ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರ ಬಗ್ಗೆ ಟ್ವಿಟರ್ ನಲ್ಲಿ ಬರೆದಿರುವ ಶರ್ಮಿಷ್ಟಾ ಮುಖರ್ಜಿ, ಬಿಜೆಪಿಯ ಸುಳ್ಳು ಪ್ರಚಾರ ಮಾಡುವ ವಿಭಾಗ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮಾಜಿ ರಾಷ್ಟ್ರಪತಿಗಳು ಅರ್ಥಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಭೇಟಿ ಬಿಜೆಪಿ ಹಾಗೂ ಸಂಘಪರಿವಾರ ಸುಳ್ಳು ಕಥೆಗಳನ್ನು ಹರಡುವುದಕ್ಕೆ ಅವಕಾಶ ಒದಗಿಸಿಕೊಡುತ್ತಿದ್ದು ತಮ್ಮ ಭೇಟಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ ಎಂದೂ ಎಚ್ಚರಿಸಿದ್ದಾರೆ.
Comments are closed.