ರಾಷ್ಟ್ರೀಯ

ಪೆಟ್ರೋಲ್ ದರ 40 ಪೈಸೆ -ಡೀಸೆಲ್ ಬೆಲೆ 30 ಪೈಸೆ ಇಳಿಕೆ

Pinterest LinkedIn Tumblr

ನವದೆಹಲಿ; ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶನಿವಾರ ಮತ್ತೊಮ್ಮೆ ಇಳಿಕೆಯಾಗಿದ್ದು, ಕಳೆದ 11 ದಿನಗಳಿಂದ ಸತತವಾಗಿ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ವರೆಗಿನ ಇಳಿಕೆಗಿಂತ ಇಂದು ಇಳಿಕೆಯಾಗಿರುವುದು ದೊಡ್ಡ ಪ್ರಮಾಣವಾಗಿದ್ದು, ಇದರಿಂದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ನಿರಾಳರಾಗುವಂತಾಗಿದೆ.

11ನೇ ದಿನದಲ್ಲಿ ಪ್ರತೀ ಲೀ. ಪೆಟ್ರೋಲ್ ದರ 40 ಪೈಸೆ ಮತ್ತು ಡೀಸೆಲ್ ಬೆಲೆ 30 ಪೈಸೆ ಕಡಿಮಯಾಗಿದೆ.

ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಭಾರೀ ಏರಿಕೆ ಕಂಡಿದ್ದವು. ಇದರಿಂದ ಗ್ರಾಹಕರು ಕಂಗಾಲಾಗುವಂತಾಗಿತ್ತು. ಇದೀಗ ದರಗಳು ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದ್ದು, ನೆರೆಹೊರೆ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿಂದು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿನ ಮಟ್ಟದಲ್ಲಿಯೇ ಇದೆ.

ಪೆಟ್ರೋಲ್ ದರ 40 ಪೈಸೆ ಮತ್ತು ಡೀಸೆಲ್ 30 ಪೈಸೆ ಇಳಿಯಾದ ಪರಿಣಾಮ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ದರ ರೂ.77.02 ಮತ್ತು ಡೀಸೆಲ್ ದರ ರೂ.68.38 ಇದೆ.

ಇತರೆ ನಗರಗಳಾದ ಮುಂಬೈ ನಲ್ಲಿ ಪೆಟ್ರೋಲ್ ದರ ರೂ.84.4 ಮತ್ತು ಡೀಸೆಲ್ ದರ ರೂ.72.70, ಕೋಲ್ಕತಾ ರೂ.79.68 ಮತ್ತು 70.83, ಚೆನ್ನೈ ರೂ.79.98 ಮತ್ತು 72.08 ಇದೆ.

Comments are closed.