ರಾಷ್ಟ್ರೀಯ

ಆಂಬ್ಯುಲೆನ್ಸ್ ಸೌಲಭ್ಯವಿಲ್ಲದ ಕಾರಣ ಗರ್ಭಿಣಿಯೊಬ್ಬರನ್ನು 6 ಕಿ.ಮೀ ದೂರ ಹೊತ್ತೊಯ್ದಗ್ರಾಮಸ್ಥರು !

Pinterest LinkedIn Tumblr

ವಿಶಾಖಪಟ್ಟಣ: ಆಸ್ಪತ್ರೆಗೆ ತೆರಳಲು ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೆ ಗರ್ಭಿಣಿಯೊಬ್ಬರನ್ನು ಗ್ರಾಮಸ್ಥರು 6 ಕಿ.ಮೀ ದೂರ ಹೊತ್ತೊಯ್ದ ಘಟನೆ ಇಲ್ಲಿನ ‘ಅನುಕು’ ಗ್ರಾಮದಲ್ಲಿ ನಡೆದಿದೆ.

ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣಕ್ಕೆ ಆಂಬ್ಯುಲೆನ್ಸ್‌ ಗ್ರಾಮಕ್ಕೆ ಬಂದಿಲ್ಲ. ಹಾಗಾಗಿ ಗ್ರಾಮಸ್ಥರ ಸಹಾಯದಿಂದ ಬಿದಿರಿನ ತುಂಡುಗಳಿಗೆ ಮೇಲುಹೊದಿಕೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋಗಲು ನಿರ್ಧರಿಸಿದರು ಎಂದು ವರದಿ ಹೇಳಿದೆ. ಸೂಕ್ತ ರಸ್ತೆ ಸಂಪರ್ಕ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Comments are closed.