ಚಂಡೀಗಢ: ಬಲವಂತದ ಸೆಕ್ಸ್ , ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿಯನ್ನು ಒತ್ತಾಯ ಪಡಿಸುವುದು ವಿಚ್ಛೇದನ ಕೇಳುವುದಕ್ಕೆ ಅರ್ಹ ಕಾರಣವಾಗುತ್ತದೆ ಎಂದು ಹರಿಯಾಣಾ ಹೈಕೋರ್ಟ್ ಹೇಳಿದೆ.
ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತಿ ಒತ್ತಾಯ ಮಾಡುತ್ತಾರೆ, ಆದ್ದರಿಂದ ವಿಚ್ಛೇದನ ಬೇಕು ಎಂದು ಪಂಜಾಬ್ ನ ಬಥಿಂಡಾದ ಮಹಿಳೆ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಆರೋಪಕ್ಕೆ ಸೂಕ್ತ ವೈದ್ಯಕೀಯ ದಾಖಲೆಗಳು ಹಾಗೂ ನಿರ್ದಿಷ್ಟ ಉದಾಹರಣೆಗಳನ್ನು ನೀಡಿಲ್ಲ ಎಂಬ ಕಾರಣ ಹೇಳಿ ಸ್ಥಳೀಯ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಎಂಎಂ ಎಸ್ ಬೇಡಿ ಹಾಗೂ ಹರಿ ಪಾಲ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಮನವಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ್ದು ಸರಿಯಾದ ಕ್ರಮ ಅಲ್ಲ. ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸುವುದು ವಿಚ್ಛೇದನ ಕೇಳುವುದಕ್ಕೆ ಅರ್ಹವಾದ ಅಂಶ ಎಂದು ಹೇಳಿದೆ.
ನಾನಾ ರೀತಿಗಳಲ್ಲಿ ಸಹನೀಯವಲ್ಲದ ಅಸ್ವಾಭಾವಿಕ ಲೈಂಗಿಕತೆಯಿಂದ ಬೇಸತ್ತ ಸಂಗಾತಿಯು ವಿಚ್ಛೇದನ ಕೋರಬಹುದು ಎಂದು ಪೀಠ ತಿಳಿಸಿದೆ.
ಅರ್ಜಿದಾರ ಮಹಿಳೆ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, 2007ರಲ್ಲಿ ಬಿಹಾರ ನಿವಾಸಿಯನ್ನು ಮದುವೆಯಾಗಿದ್ದರು. ಅವರಿಗೆ ಒಂದು ಮಗು ಇದೆ.
Comments are closed.