ಭೋಪಾಲ್: ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಮಧ್ಯಪ್ರದೇಶದ ಬಿಜೆಪಿ ಶಾಸಕ ಕಪಾಳಮೋಕ್ಷ ಮಾಡಿದ್ದು ಇದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಾಸ್ ಜಿಲ್ಲೆಯ ಉದಯ್ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದಿದ್ದ ಶಾಸಕರ ಸೋದರಳಿಯ ಅಲ್ಲಿದ್ದ ವ್ಯಕ್ತಿಯೊಬ್ಬರ ಕೈಯ್ಯಿಂದ ನೀರಿನ ಬಾಟಲಿಯನ್ವು ಕಸಿದುಕೊಂಡಿದ್ದಾನೆ. ಈ ಕುರಿತು ಪೊಲೀಸ್ ಪೇದೆ ಸಂತೋಷ್ ಇವಾಂತಿ ಪ್ರಶ್ನಿಸಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಾಸಕ ತನ್ನ ಸೋದರಳಿಯನನ್ನು ಪ್ರಶ್ನಿಸಿದ ಪೇದೆಗೆ ಕಪಾಳಮೋಕ್ಷ ಮಾಡಿದ್ದಾನೆ.
ಶಾಸಕ ಪೇದೆಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದು, ಈ ಸಂದರ್ಭದಲ್ಲಿ ಪೇದೆ ಹಿಂದಕ್ಕೆ ಕೈ ಕಟ್ಟಿಕೊಂಡು ಮುಖ ಕೆಳಕ್ಕೆ ಹಾಕಿಕೊಂಡು ನಿಂತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಾಸಕನ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
Comments are closed.