ನವದೆಹಲಿ: ಕೇಂದ್ರ ಸರಕಾರದ ಮಹತ್ತರ ಯೋಜನೆಯಲ್ಲಿ ಒಂದಾಗಿರುವ ಡಿಜಿಟಲ್ ಇಂಡಿಯಾಗೆ ಬೆಂಬಲ ಸೂಚಿಸಿದ್ದ ಗೂಗಲ್ ಸಂಸ್ಥೆ ಇದೀಗ ಭಾರತದನ 400 ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆಯನ್ನು ಆರಂಭಿಸಿದೆ ಎಂದು ಹೇಳಿದೆ.
ರೈಲ್ಟೆಲ್ನೊಂದಿಗೆ ಸಹಭಾಗಿತ್ವದಲ್ಲಿ ಗೂಗಲ್ 400 ರೈಲ್ವೇ ನಿಲ್ದಾಣದಲ್ಲಿ ಉಚಿತ ಇಂಟರ್ನೆಟ್ ಸೇವೆಯನ್ನು ನೀಡುತ್ತಿದ್ದು, ಗುರುವಾರದಂದು ಅಸ್ಸಾಂನ ದಿಬ್ರಾಗರ್ನ ನಿಲ್ದಾಣದಲ್ಲಿ ಉಚಿತ ಸೇವೆಯನ್ನು ಆರಂಭಿಸಿದೆ. ‘ಲಕ್ಷಾಂತರ ಮಂದಿಗೆ ಉತ್ತಮ ಗುಣಮಟ್ಟದ ಉಚಿತ ಇಂಟರ್ನೆಟ್ ಸೇವೆ ಒದಗಿಸುವ ಈ ಯೋಜನೆ ನಡೆದು ಬಂದ ಹಾದಿ ಬಹಳ ಮಹತ್ತರವಾಗಿದೆ ಎಂದು ಪಾರ್ಟ್ನರ್ಶಿಪ್ ಇಂಡಿಯಾದ ನಿರ್ದೇಶಕ ಕೆ. ಸೂರಿ ಹೇಳಿದ್ದಾರೆ.
ಪ್ರತೀ ತಿಂಗಳು 80 ಲಕ್ಷಕ್ಕೂ ಅಧಿಕ ಮಂದಿ ಇಂಟರ್ನೆಟ್ ಬಳಸುತ್ತಿದ್ದು, ಈ ಯೋಜನೆಯಿಂದಾಗಿ ಭಾರತದಂತಹ ಹಲವಾರು ರಾಷ್ಟ್ರಗಳು ಇಂಟರ್ನೆಟ್ ಬಳಕೆ ಮಾಡುವಂತಾಗಿದೆ. ರೈಲ್ವೈರ್ಎಂಬ ಹೆಸರಿನಡಿ ಈ ಸೇವೆಯನ್ನು ನೀಡಲಾಗಿದ್ದು, ಸುಮಾರು 30 ನಿಮಿಷಗಳ ಕಾಲ ಬಳಕೇದಾರರಿಗೆ ಉಚಿತ ಸೇವೆ ದೊರಕುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ಬಿಲಿಯನ್ ಮಂದಿಗೆ ಇಂಟರ್ನೆಟ್ ಸೇವೆ ನೀಡುವ ಉದ್ದೇಶ ಹೊಂದಿರುವ ಗೂಗಲ್ನ ಒಂದು ಹಂತ ಪುಣೆಯಲ್ಲಿ ಪೂರ್ತಿಯಾಗಿದೆ, ಅದರಂತೆಯೇ ರೈಲ್ಟೆಲ್ ಕೂಡಾ ಭಾರತೀಯ ರೈಲ್ವೇ ನಿಲ್ದಾಣದಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಸಫಲವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Comments are closed.