ನವದೆಹಲಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬೆನ್ನಲ್ಲೇ ಜೆಎನ್ಯೂ ವಿಶ್ವಾವಿದ್ಯಾಲಯ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ಗೆ ಜೀವ ಬೆದರಿಕೆ ಎನ್ನಲಾಗಿದೆ. ಈ ಸಂಬಂಧ ಉಮರ್ ದೆಹಲಿ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ನ್ಯೂಸ್-18 ಗೆ ಪ್ರತಿಕ್ರಿಯಿಸಿದ ಉಮರ್, ಭೂಗತ ಪಾತಕಿ ರವಿ ಪೂಜಾರಿ ಎಂಬಾತನಿಂದ ಜೀವ ಬೆದರಿಕೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ, ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡದಂತೆ ಬೆದರಿಕೆ ಹಾಕಲಾಗಿದೆ. ಜಿಗ್ನೇಶ್ ಮೊಬೈಲ್ಗೆ ಸಂದೇಶ ಬಂದಿದ್ದು, ನನ್ನನ್ನು ಕೊಲ್ಲುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು 2016 ರಲ್ಲಿ ಉಮರ್ ತಂದೆ ಅವರಿಗೆ ಕರೆ ಮಾಡಿ ಉಮರ್ ಅವರನ್ನು ದೇಶ ಬಿಡುವಂತೆ ಕೇಳಿದ್ದಾರೆ ಎನ್ನಲಾಗಿತ್ತು ಒಂದು ವೇಳೆ ದೇಶ ತೊರೆಯದಿದ್ದರೆ, ಉಮರ್ ಖಾಲಿದ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಇಲಾಖೆಗೆ ಉಮರ್ ತಂದೆ ದೂರು ನೀಡಿದ್ದರು.
ಈ ಹಿಂದೆ ಅಫ್ಜಲ್ ಗುರು ಗಲ್ಲು ಶಿಕ್ಷೆಯನ್ನು ಕಾರ್ಯಗಾರ ಮಾಡಿದ್ದರು ಮತ್ತು ದೇಶ ವಿರೋಧಿ ಘೋಷಣೆಗನ್ನು ಕೂಗಿದ್ದರು ಎನ್ನುವ ಆರೋಪದ ಅಡಿಯಲ್ಲಿ ಮಾಜಿ ಜೆಎನ್ಯೂ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯ, ಅನಿರ್ಬನ್ ಭಟ್ಟಾಚಾರ್ಯ ಮತ್ತು ಉಮರ್ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
Comments are closed.