ರಾಷ್ಟ್ರೀಯ

ಬಿಜೆಪಿ ಸೋಲಿಸಲು ಬಿಎಸ್‌ಪಿ ಜೊತೆಗಿನ ಮೈತ್ರಿ ಮುಂದುವರಿಕೆ: ಅಖಿಲೇಶ್‌ ಯಾದವ್‌

Pinterest LinkedIn Tumblr


ಆಗ್ರಾ : ಬಿಜೆಪಿಯನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಸಮಾಜವಾದಿ ಪಾರ್ಟಿ ಹಾಗೂ ಬಿಎಸ್‌ಪಿ ತನ್ನ ಮೈತ್ರಿ ಮುಂದುವರೆಸಲಿದೆ ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

ಬಿಜೆಪಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ 2 ಪಕ್ಷಗಳು ಒಂದಾಗಿ, ಕೆಲಸ ಮಾಡಲು ಸಿದ್ಧ ಇರುವುದಾಗಿ ಅವರು ಮಣಿಪುರದಲ್ಲಿ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸಲು 2-3 ಸೀಟುಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಬೇಕಾದಲ್ಲಿ ಅದಕ್ಕೂ ಸಿದ್ದವಿರುವುದಾಗಿ ಅಖಿಲೇಶ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಲೋಕಸಭೆಯ ಉಪಚುನಾವಣೆಗಳಿಗೆ ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಬಿಜೆಪಿಯನ್ನು ಸೋಲಿಸುವುದೇ ಪ್ರಮುಖ ಉದ್ಧೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರೆಸಲಾಗುವುದು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದಲ್ಲಿ, ಆಗ್ರ- ಲಖನೌ ಎಕ್ಸ್‌ಪ್ರೆಸ್‌ ಹೈವೇನಲ್ಲಿ ರೈತರಿಗೆ ಟೋಲ್‌ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಚುನಾವಣಾ ಪ್ರಚಾರ ಕೈಗೊಂಡಲ್ಲಿ ಬಿಜೆಪಿ ಸೋತಿದೆ. ಖೈರಾನಾ ಲೋಕಸಭೆ ಹಾಗೂ ನೂರ್‌ಪುರ ವಿಧಾನಸಭಾ ಉಪಚುನಾವಣೆಯನ್ನೂ ಬಿಜೆಪಿ ಸೋತಿದೆ. ಯೋಗಿ ಆದಿತ್ಯನಾಥ್‌ ಅವರ ಕ್ಷೇತ್ರವಾಗಿದ್ದ ಗೋರಖ್‌ಪುರ ಹಾಗೂ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ಕ್ಷೇಥ್ರವಾದ ಫುಲ್‌ಪುರದಲ್ಲೂ ಬಿಜೆಪಿ ಸೋಲು ಕಂಡಿದೆ ಎಂದು ಹೇಳಿದರು.

ಕಳೆದ ತಿಂಗಳು ನಡೆದ ಬಿಎಸ್‌ಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಸಮರ ಸಾರುವ ಅಗತ್ಯವಿದ್ದು, ಎಲ್ಲ ಪಕ್ಷಗಳು ಒಂದಾಗುವ ಮೂಲಕ ಪ್ರತಿ ಪಕ್ಷ ನಿಗದಿತ ಸೀಟುಗಳನ್ನು ಗೆಲ್ಲುವ ಅವಶ್ಯಕತೆ ಇದೆ.

Comments are closed.