ರಾಷ್ಟ್ರೀಯ

ವಿಡಿಯೋಕಾನ್ ನ 39,000 ಕೋಟಿ ರೂ. ನಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮತ್ತು ಬ್ರೆಜಿಲ್ ಸರಕಾರ ಹೊಣೆ!

Pinterest LinkedIn Tumblr


ಹೊಸದಿಲ್ಲಿ: ವಿಡಿಯೋಕಾನ್ ಇಂಡಸ್ಟ್ರೀಸ್‌ ಲಿ.ನ 39,000 ಕೋಟಿ ರೂ. ನಷ್ಟ ಮತ್ತು ಸಾಲಬಾಕಿಗೆ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮತ್ತು ಬ್ರೆಜಿಲ್ ಸರಕಾರ ಹೊಣೆ ಎಂದು ಕಂಪನಿ ದೂಷಿಸಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್‌ಟಿ) ಕಳೆದ ವಾರ ವಿಡಿಯೋಕಾನ್ ಸಾಲ ಮರುಪಾವತಿಗೆ ಸಂಬಂಧಿಸಿ ನಷ್ಟ ತುಂಬಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಸಾಲಬಾಕಿ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ವಿಡಿಯೋಕಾನ್, ಪ್ರಧಾನಿ ಮೋದಿ ಕೈಗೊಂಡ ನೋಟು ನಿಷೇದ ಕ್ರಮದ ನಂತರ ಸಂಸ್ಥೆ ನಷ್ಟ ಅನುಭವಿಸಿತು. ಜತೆಗೆ ಸಿಆರ್‌ಟಿ ಟಿವಿ ಉದ್ಯಮವನ್ನು ಮುಚ್ಚಬೇಕಾಯಿತು. ಅಲ್ಲದೆ ಸುಪ್ರೀಂ ಕೋರ್ಟ್ ಪರವಾನಗಿ ರದ್ದುಪಡಿಸಿದ್ದರಿಂದ ಬ್ರೆಜಿಲ್‌ನಲ್ಲಿ ತೈಲ ಮತ್ತು ಅನಿಲ ಉದ್ಯಮಕ್ಕೆ ತಡೆಯುಂಟಾಯಿತು. ಇದರಿಂದ ವಿಡಿಯೋಕಾನ್ ನಷ್ಟ ಅನುಭವಿಸಿತು ಎಂದು ಹೇಳಿದೆ.

ಸಾಲಬಾಕಿ ವಸೂಲಿಗೆ ಸಂಬಂಧಿಸಿ ಎನ್‌ಸಿಎಲ್‌ಟಿ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಉದ್ಯಮ ನಷ್ಟದ ಬಳಿಕ ವಿಡಿಯೋಕಾನ್ ಷೇರು ಬೆಲೆ ಶೇ. 96 ಕುಸಿತ ಕಂಡು ಗಣನೀಯವಾಗಿ ನೆಲಕಚ್ಚಿದೆ. ಮಂಗಳವಾರ ಬಿಎಸ್‌ಇಯಲ್ಲಿ ವಿಡಿಯೋಕಾನ್ ಷೇರು 7.65 ರೂ.ಗೆ ಮಾರಾಟವಾಗಿದೆ.

Comments are closed.