ಗುವಾಹತಿ: ಆಸ್ಸಾಂನ ಸೋನಾಯಿ ಕ್ಷೇತ್ರದ ಬಿಜೆಪಿಯ ಮುಸ್ಲಿಂ ಶಾಸಕನಿಗೆ ಇನ್ನು 15 ದಿನಗಳಲ್ಲಿ ಪಕ್ಷವನ್ನು ಬಿಡುವಂತೆ ಬೆದರಿಕೆ ಪತ್ರ ಬಂದಿದ್ದು ಜತೆಗೆ ಎರಡು ಸಜೀವ ಗುಂಡುಗಳನ್ನೂ ಕಳಿಸಲಾಗಿದೆ.
ಈ ಬಗ್ಗೆ ಪೊಲೀಸರಿಗೆ ತಿಳಿಸಿರುವ ಶಾಸಕ ಅಮಿನುಲ್ ಹಕ್ ಲಸ್ಕರ್, ಪತ್ರದಲ್ಲಿ ಬಿಜೆಪಿ, ಆರ್ಎಸ್ಎಸ್ಗಳನ್ನು ಕೋಮು ಸಂಘಟನೆಗಳೆಂದು ಹೇಳಲಾಗಿದೆ. ಈ ಸಂಘಟನೆಗಳು ಮುಸ್ಲಿಂ ಧರ್ಮದ ವಿರೋಧಿಯಾಗಿವೆ. ನೀವೊಬ್ಬ ಮುಸ್ಲಿಂ ಆಗಿ ಆಗಿ ಬಿಜೆಪಿಯಲ್ಲಿರುವುದು ಬೇಡ. ಹಾಗಾಗಿ ಕೂಡಲೇ ಆ ಪಕ್ಷವನ್ನು ಬಿಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಪೋಸ್ಟ್ ಮೂಲಕ ಪತ್ರ ಕಳಿಸಿರುವ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಪತ್ರವು ಬರಾಕ್ ವ್ಯಾಲಿ ಝೋನ್ನ ಮುಸ್ಲಿಂ ಸಂರಕ್ಷಣಾ ಮತ್ತು ಅಭಿವೃದ್ಧಿ ಪಡೆ ಹೆಸರಿನಲ್ಲಿ ಅಪರಿಚಿತ ಗುಂಪಿನಿಂದ ಬಂದಿದೆ. ನಾವು ಎಫ್ಐಆರ್ ದಾಖಲಿಸಿಕೊಂಡಿದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.