ರಾಷ್ಟ್ರೀಯ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯಿಂದ ರಾಜೀನಾಮೆ ಕೊಡಿಸಲು ಬಿಜೆಪಿಯಿಂದ ತಯಾರಿ!

Pinterest LinkedIn Tumblr


ಗಾಂಧಿನಗರ: ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ನಡೆಸುತ್ತಿರುವ ಬಿಜೆಪಿ, ಯುವಕರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯಿಂದ ರಾಜೀನಾಮೆ ಕೊಡಿಸಿ ಹೊಸ ಯುವ ಮುಖಕ್ಕೆ ಮಣೆ ಹಾಕಲು ಬಿಜೆಪಿ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ರಿಂದಲೂ ರಾಜೀನಾಮೆ ಕೊಡಿಸಲು ತೀರ್ಮಾನ ಮಾಡಲಾಗಿದ್ದು, ಸಚಿವ ಸಂಪುಟ ರಚನೆ ಬಳಿಕ ಮುಖ್ಯಮಂತ್ರಿ ರೂಪಾನಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ್ದು, ಮತ್ತೆ ಪಕ್ಷ ಸಂಘಟನೆಗೊಳಿಸುವ ನಿಟ್ಟಿನಲ್ಲಿ ಸರ್ಜರಿ ಮಾಡಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಮುಖವನ್ನು ಕೂರಿಸಿ ತನ್ನ ವರ್ಚಸ್ಸು ವೃದ್ಧಿ ಜತೆಗೆ ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗಿದೆ.

2012ರ ವಿಧಾನಸಭೆ ಚುನಾವನೆಯಲ್ಲಿ ಸೌರಾಷ್ಟ್ರ ಭಾಗದಲ್ಲಿ ಹೆಚ್ಚಿನ ಸೀಟು ಗಳಿಸಿದ್ದ ಬಿಜೆಪಿ 2017ರ ಚುನಾವಣೆಯಲ್ಲಿ ಈ ಭಾಗದಲ್ಲಿ ಮುಗ್ಗರಿಸಿತ್ತು. ಹಾಗಾಗಿ ತನ್ನ ಆ ಭಾಗದಲ್ಲಿ ಹಿಡಿತ ಸಾಧಿಸಲು ಆ ಭಾಗದವರನ್ನೇ ಮುಖ್ಯಮಂತ್ರಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.

Comments are closed.