ಹೊಸದಿಲ್ಲಿ: ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಶುರು ಮಾಡಿರುವ ಫಿಟ್ನೆಸ್ ಚಾಲೆಂಜ್ ಅಭಿಯಾನ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್‌ಗೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಎಸ್‌ಪಿ ) ಪಂಕಜ್ ಸದಾ ಫಿದಾ ಆಗಿದ್ದು, ತನ್ನ ಜಿಲ್ಲೆಯ 1,700 ಪೊಲೀಸರಿಗೆ ಸಿಕ್ಸ್ ಪ್ಯಾಕ್ ಬೆಳೆಸಿಕೊಳ್ಳುವಂತೆ ಚಾಲೆಂಜ್ ಹಾಕಿದ್ದಾರೆ. ಅಲ್ಲದೆ, ಚಾಲೆಂಜ್ ಕಂಪ್ಲೀಟ್ ಮಾಡಿದ ಬಳಿಕ 10,000 ರೂ. ಹಾಗೂ ಕ್ಲಾಸ್ 1 ಸರ್ಟಿಫಿಕೇಟ್ ನೀಡುವುದಾಗಿಯೂ ಸಾರ್ವಜನಿಕ ಸಭೆಯಲ್ಲಿ ಎಸ್‌ಪಿ ಘೋಷಿಸಿದ್ದಾರೆ.
ತನ್ನ ಹಾಗೆ ದೇಹವನ್ನು ಹೊಂದಿದವರಿಗೆ 10 ಸಾವಿರ ಬಹುಮಾನ ಹಾಗೂ ಕ್ಲಾಸ್ 1 ಪ್ರಮಾಣಪತ್ರ ನೀಡುವುದಾಗಿ ಎಸ್‌ಪಿ ಹೇಳಿದ್ದಾರೆ. ಜತೆಗೆ, ಪೊಲೀಸರು ತಡೆರಹಿತವಾಗಿ ಐದು ಸೂಪರ್‌ಮ್ಯಾನ್ ಫುಶಪ್‌ಗಳು, 50 ಫುಶಪ್‌ಗಳು, 30 ಚಿನ್ ಅಪ್‌ಗಳು ಹಾಗೂ 10 ಬಾರಿ ತಡೆರಹಿತವಾಗಿ ಕ್ಲಾಪ್ ಅಪ್‌ಗಳನ್ನು ಮಾಡಲು ಸಹ ಎಸ್‌ಪಿ ಆದೇಶಿಸಿದ್ದಾರೆ. ಅಲ್ಲದೆ, ತನ್ನ ದೇಹದ ಫೋಟೋಗಳನ್ನು ಎಸ್‌ಪಿ ಪೊಲೀಸರಿಗೆ ಕಳಿಸಿದ್ದು, ಈ ರೀತಿ ನಿಮ್ಮ ದೇಹಗಳನ್ನು ಬೆಳೆಸಿಕೊಳ್ಳುವಂತೆ ಸವಾಲು ಹಾಕಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್‌ಪಿ ಪಂಕಜ್, ನಾವು ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ ನಡೆಸುತ್ತೇವೆ. 1,700 ಪೊಲೀಸ್ ಅಧಿಕಾರಿಗಳ ಪೈಕಿ 800 ಮಂದಿ ಅಧಿಕ ತೂಕ ಹೊಂದಿದ್ದಾರೆ. ಹೀಗಾಗಿ ಅವರು ತಮ್ಮ ದೇಹದ ಸಮತೋಲನ ಕಾಯ್ದುಕೊಳ್ಳಬೇಕಿದೆ. ತಮ್ಮ ಕಾರ್ಯನಿರ್ವಹಣೆಯನ್ನು ಕಳೆದುಕೊಳ್ಳದಂತೆ ಪೊಲೀಸರು ತಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಈ ರೀತಿ ಸವಾಲು ಹಾಕಿರುವುದಾಗಿ ಝಜ್ಜರ್ ಜಿಲ್ಲಾ ಎಸ್‌ಪಿ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ದೈಹಿಕ ತರಬೇತಿ ಕ್ಲಾಸ್‌ಗಳನ್ನು ನಡೆಸುವ ಎಸ್‌ಪಿ ಪ್ರಧಾನಿ ಮೋದಿಯ ಗಮನವನ್ನು ಸಹ ಸೆಳೆದಿದ್ದಾರೆ. ಪಂಕಜ್‌ರ ವೀಡಿಯೊವೊಂದನ್ನು ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ರೀಟ್ವೀಟ್ ಮಾಡಿರುವುದು ಹರಿಯಾಣ ಎಸ್‌ಪಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
Comments are closed.