ರಾಷ್ಟ್ರೀಯ

ಕೊಲೆಯಾದ ಮೇಜರ್ ಪತ್ನಿ ಮತ್ತು ಮೇಜರ್ ಹಂಡಾ ನಡುವೆ ಕೇವಲ 6 ತಿಂಗಳಲ್ಲಿ 3500 ಬಾರಿ ಫೋನ್ ಸಂಭಾಷಣೆ !

Pinterest LinkedIn Tumblr

ನವದೆಹಲಿ: ದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿ ಶೈಲಜಾ ಅವರ ಭೀಕರ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೊಲೆಗೂ ಮುನ್ನ ಮೇಜರ್ ಪತ್ನಿ ಹಾಗೂ ಕೊಲೆ ಆರೋಪಿ ಮೇಜರ್ ಹಂಡಾ ನಡುವೆ ಕೇವಲ ಆರು ತಿಂಗಳ ಅವಧಿಯಲ್ಲಿ ಬರೊಬ್ಬರಿ 3500ಕ್ಕೂ ಹೆಚ್ಚು ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೇಜರ್ ಹಂಡಾ ಮತ್ತು ಕೊಲೆಯಾದ ಮೇಜರ್ ದ್ವಿವೇದಿ ಪತ್ನಿ ಶೈಲಜಾ ಅವರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿರುವ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದೂರವಾಣಿ ಕರೆಗಳು ಮಾಹಿತಿ, ಎಸ್ ಎಂಎಸ್, ವಾಟ್ಸಪ್ ಸಂದೇಶಗಳು, ಫೇಸ್ ಬುಕ್ ದತ್ತಾಂಶ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈ ಪೈಕಿ ಎರಡೂ ಮೊಬೈಲ್ ಗಳಲ್ಲಿ ಎರಡು ಆ್ಯಪ್ ಗಳು ಡಿಲೀಟ್ ಆಗಿದ್ದು, ಈ ಆ್ಯಪ್ ಗಳ ಮಾಹಿತಿಯನ್ನು ಬ್ಯಾಕ್ ಅಪ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಮೇಜರ್ ಹಂಡಾ ಅವರು ಮೇಜರ್ ದ್ವಿವೇದಿ ಪತ್ವಿ ಶೈಲಜಾ ಅವರ ಕುರಿತಂತೆ ಗಂಭೀರನಾಗಿದ್ದ. ಆಕೆಗಾಗಿ ತನ್ನ ಪತ್ನಿಯನ್ನೇ ತೊರೆಯಲು ಸಿದ್ಧನಾಗಿದ್ದ. ಶೈಲಜಾ ಕೊಲೆಯಾಗುವ ಹಿಂದಿನ ದಿನಕೂಡ ಆಕೆಗಾಗಿ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಬಳಿಕ ಮಾರನೆಯ ಆಕೆಯೊಂದಿಗೆ ಮಾತನಾಡಬೇಕು ಎಂದು ಹೇಳಿ ಕರೆಸಿಕೊಂಡಿದ್ದಾನೆ. ಆಕೆ ಕೂಡ ತನ್ನ ಶಾಪಿಂಗ್ ಅನ್ನು ಅರ್ಧಕ್ಕೆ ಮೊಚಕು ಗೊಳಿಸಿ ಆತನ ಭೇಟಿಯಾಗಿದ್ದಾಳೆ. ಅಂದು ಕಾರಿನಲ್ಲಿ ಆತ ಮದುವೆ ಕುರಿತಂತೆ ಆಕೆಯ ಮೇಲೆ ಒತ್ತಡ ಹೇರಿದ್ದು, ಆಕೆ ಮದುವೆಯಾಗಲು ನಿರಾಕರಿಸಿದಾಗ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಇನ್ನು ಕಾರಿನಲ್ಲಿ ಆಕೆಯ ರಕ್ತ, ಕೂದಲು ದೊರೆತಿದ್ದು, ಇದು ಶೈಲಜಾ ಅವರದ್ದೇ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ. ಕಾರಿನಿಂದ ಆಕೆಯನ್ನು ತಳ್ಳಿ ಇದು ಆಪಘಾತ ಎಂಬಂತೆ ಬಿಂಬಿಸಲು ಆತ ಯತ್ನಿಸಿದ್ದ. ಕಾರನ್ನು ವಾಶ್ ಮಾಡಿ ಯಾವುದೇ ಸಾಕ್ಷಿ ದೊರೆಯದಂತೆ ಮಾಡಲು ಯತ್ನಿಸಿದ್ದ. ಆದರೆ ಆತನ ಹೋಂಡಾ ಸಿಟಿ ಕಾರನ್ನು ಪರಿಶೀಲಿಸಿದ ವಿಧಿವಿಜ್ಞಾನ ತಜ್ಞರು ಕಾರಿನಲ್ಲಿದ್ದ ರಕ್ತದ ಮಾದರಿ ಮತ್ತು ಕೂದಲನ್ನು ವಶಕ್ಕೆ ಪಡೆದಿದ್ದರು. ಅಂತೆಯೇ ಶೈಲಜಾ ಅವರನ್ನು ಫೋನ್ ಅನ್ನು ಛಿದ್ರ ಮಾಡಿದ್ದ ಹಂಡಾ ತನ್ನದೇ ಮನೆಯ ಸಮೀಪದ ಕಸದ ಬುಟ್ಟಿಗೆ ಎಸೆದಿದ್ದ. ತನಿಖೆ ವೇಳೆ ಇದು ಪತ್ತೆಯಾಗಿತ್ತು. ಮೇಜರ್ ಹಂಡಾ ಕಾರಿನಲ್ಲಿ ಶೈಲಜಾ ಅವರ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು, ಅಲ್ಲದೆ ಘಟನೆ ನಡೆದ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮೇಜರ್ ಹಂಡಾರೊಂದಿಗೆ ಶೈಲಜಾ ಕಾರಿನಲ್ಲಿ ತೆರಳಿದ್ದ ದೃಶ್ಯಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.