ರಾಷ್ಟ್ರೀಯ

ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿನ ಓವರ್‌ ಟೈಂಗೆ ಕತ್ತರಿ!

Pinterest LinkedIn Tumblr


ನವದೆಹಲಿ: ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿನ ಆಪರೇಷನಲ್‌ ಸಿಬ್ಬಂದಿ ಹಾಗೂ ಕೈಗಾರಿಕಾ ಕ್ಷೇತ್ರದ ನೌಕರರನ್ನು ಹೊರತುಪಡಿಸಿ ಇತರ ವಲಯಗಳ ಯಾವುದೇ ನೌಕರರಿಗೆ ಈವರೆಗೆ ನೀಡಲಾಗುತ್ತಿರುವ ಹೆಚ್ಚುವರಿ ಸೇವಾ ಭತ್ಯೆಯನ್ನು (ಒ.ಟಿ. ಎ) ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜತೆಗೆ, ಹೆಚ್ಚುವರಿ ಸೇವಾ ಭತ್ಯೆಯನ್ನು ಬಯೋಮೆಟ್ರಿಕ್‌ ದಾಖಲೆಗಳನುಸಾರವಷ್ಟೇ ನೀಡಲೂ ತೀರ್ಮಾನಿಸಿದೆ. ಏಳನೇ ವೇತನ ಆಯೋಗದ ಶಿಫಾರಸು ಮೇರೆಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತಂತೆ ಆದೇಶ ಹೊರಡಿಸಿದೆ ಎಂದು ವೆಚ್ಚ ಇಲಾಖೆ ತಿಳಿಸಿದೆ. ಇದರ ಜತೆಗೆ, 1991ರಲ್ಲಿ ನಿಗದಿಯಾಗಿದ್ದ ಒಟಿಎ ದರವನ್ನು ಪರಿಷ್ಕರಿಸದೇ ಯಥಾಸ್ಥಿತಿಯಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ.

ಸಚಿವರು ಹಾಗೂ ಪತ್ರಾಂಕಿತ ಅಧಿಕಾರಿಗಳ ಮಟ್ಟಕ್ಕಿಂತ ಕೆಳಗಿನ ಎಲ್ಲಾ ಸರ್ಕಾರಿ ನೌಕರರನ್ನು ಆಪರೇಷನಲ್‌ ಸಿಬ್ಬಂದಿಯೆಂದು ಪರಿಗಣಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ. ಈ ಆದೇಶವು ಕೇಂದ್ರದ ಎಲ್ಲಾ ಸಚಿವಾಲಯಗಳು ಹಾಗೂ ಸರ್ಕಾರದ ಸಹಯೋಗಿ ಸಂಸ್ಥೆಗಳಿಗೂ ಅನ್ವಯವಾಗಲಿದೆ.

Comments are closed.