ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಈಗ ಜಿಯೋ ವೈಫೈ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮತ್ತೊಂದು ನೂತನ 500 ರೂ. ಕ್ಯಾಶ್ ಬ್ಯಾಕ್ ಆಫರ್ ಪ್ರಕಟಿಸಿದೆ.
ಜಿಯೋ 499 ರೂ. ವೈಫೈ ಪೋಸ್ಟ್ ಪೇಯ್ಡ್ ಡಿವೈಸ್ ಖರೀದಿಸುವ ಗ್ರಾಹಕರು ಕ್ಯಾಶ್ ಬ್ಯಾಕ್ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಸೌಲಭ್ಯವು ಜಿಯೋ ಸ್ಟೋರ್, ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.
ನೂತನ ಯೋಜನೆಯಲ್ಲಿ ಕನಿಷ್ಠ 199 ರೂ. ಪೋಸ್ಟ್ ಪೇಯ್ಡ್ ಸಿಮ್ ಖರೀದಿಸಬೇಕು. 12 ತಿಂಗಳು ಪಾವತಿಸಬೇಕು. ಒಂದು ವರ್ಷದ ನಂತರ 500 ರೂ. ಕ್ಯಾಶ್ ಬ್ಯಾಕ್ ಗ್ರಾಹಕರ ಖಾತೆಗೆ ಪಾವತಿಯಾಗಲಿದೆ.
ಜಿಯೋ ಇತ್ತೀಚಿಗಷ್ಟೆ ಒಪ್ಪೋ ಮುಂಗಾರು ಯೋಜನೆಯನ್ನು ಪ್ರಕಟಿಸಿತ್ತು. ಒಪ್ಪೋ ಮೊಬೈಲ್ ಖರೀದಿಸುವವರು ಜಿಯೋ ಸಿಮ್ ಸೇರಿರಂತೆ 1800 ರೂ. ಕ್ಯಾಶ್ ಬ್ಯಾಕ್ ಆಫರ್’ಗಳನ್ನು ಪಡೆದುಕೊಳ್ಳುತ್ತಾರೆ. ಈ ಹಣವು ಗ್ರಾಹಕರಿಗೆ 600 ರೂ. ನಂತೆ 3 ತಿಂಗಳು ಲಭ್ಯವಾಗಲಿದೆ. ಒಪ್ಪೋ ಯೋಜನೆ ಜು.13, 26 ಹಾಗೂ 29 ರಂದು ರೀಚಾರ್ಜ್ ಮಾಡಿಸಿದವರಿಗೆ ಮಾತ್ರ ಅನ್ವಯವಾಗುತ್ತದೆ. ಜೊತೆಗೆ ಗ್ರಾಹಕರು ಮೇಕ್ ಮೈ ಟ್ರಿಪ್ ಮೂಲಕ 1300 ರೂ. ರಿಯಾಯಿತಿ ಕೂಪನ್’ಗಳನ್ನು ಪಡೆದುಕೊಳ್ಳುತ್ತಾರೆ.
ಜಿಯೋ ಸಂಸ್ಥೆಯು 10 ಕೋಟಿ ಚಂದಾದಾರರನ್ನು ಹೊಂದಿದ್ದು ನಿತ್ಯ ಸರಾಸರಿ 9700 ಎಂಬಿ ಡಾಟಾ ಉಪಯೋಗಿಸುತ್ತಾರೆ. ಬೇರೆ ಕಂಪನಿಗಳ ವಿಶೇಷ ಯೋಜನೆಗಳ ನಡುವೆಯೂ ಜಿಯೋ ಮುನ್ನಡೆ ಸಾಧಿಸಿದೆ.
Comments are closed.