ಚೆನ್ನೈ: ಇಸ್ರೋದ ಬಾಹ್ಯಾಕಾಶ ವೀಕ್ಷಣಾ ಉಪಗ್ರಹ ಆಸ್ಟ್ರೋಸ್ಯಾಟ್ ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ಯಾಲೆಕ್ಸಿಗಳ ಗುಂಪನ್ನು ಪತ್ತೆ ಹಚ್ಚಿದೆ.
ಇವುಗಳಿಗೆ ಅಬೆಲ್ 2256 ಎಂದು ಹೆಸರಿಡಲಾಗಿದ್ದು, ಮೂರು ಗ್ಯಾಲೆಕ್ಸಿಗಳು ಪರಸ್ಪರ ಒಂದೊಕ್ಕೊಂದು ಹೊಂದಿಕೊಂಡಂತೆ ಇದ್ದು, ಭವಿಷ್ಯದಲ್ಲಿ ಇವುಗಳು ಸಂಪೂರ್ಣ ಒಂದಾಗಿ ದೊಡ್ಡ ಗ್ಯಾಲಕ್ಸಿ ಪುಂಜವಾಗಿ ಮಾರ್ಪಡಲಿದೆ ಎಂದು ಅಂದಾಜಿಸಲಾಗಿದೆ. ಭೂಮಿಯ ಗ್ಯಾಲೆಕ್ಸಿಯಾದ ಮಿಲ್ಕಿವೇಯಿಂದ ಸುಮಾರು ನೂರು ಪಟ್ಟು ದೊಡ್ಡದಾಗಿರುವುದಾಗಿ ಇಸ್ರೋ ತಿಳಿಸಿದೆ.
ಇಸ್ರೋ ಗ್ಯಾಲೆಕ್ಸಿಯ ಮಾಹಿತಿಯನ್ನು ಬಿತ್ತರಿಸಿದ್ದು, ನೇರಳಾತೀತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಬಾಹ್ಯಾಕಾಶ ವಿಜ್ಞಾನಿಗಳು ಈ ಗ್ಯಾಲೆಕ್ಸಿಗಳ ಅಧ್ಯಯನಕ್ಕೆ ಇಳಿದಿದ್ದು, ಅಲ್ಟ್ರಾ ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮೂಲಕ ವಿವಿಧ ವಿಚಾರಗಳನ್ನು ಅಧ್ಯಯನ ನಡೆಸುತ್ತಿದ್ದಾರೆ. ಮೂರು ಗ್ಯಾಲೆಕ್ಸಿಗಳು ಅನೇಕ ಗ್ಯಾಲೆಕ್ಸಿಗಳನ್ನು ಹೊಂದಿದ್ದು, ಈ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಮೂರು ಗ್ಯಾಲೆಕ್ಸಿಗಳು ಒಂದು ಭಾಗ ಮಾತ್ರವೇ ಕೂಡಿಕೊಂಡಂತೆ ಗೋಚರವಾಗುತ್ತಿದ್ದು, ಮುಂದಿನ ದಿನದಲ್ಲಿ ಗ್ಯಾಲೆಕ್ಸಿಗಳು ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿವೆ ಎಂದು ಇಸ್ರೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Comments are closed.