ರಾಷ್ಟ್ರೀಯ

2019ರ ಲೋಕಸಭೆ ಚುನಾವಣೆ ಮೊದಲೇ ಬಿಜೆಪಿಗೆ ಮತ್ತೊಂದು ಆಘಾತ!

Pinterest LinkedIn Tumblr


ಅಗರ್ತಲ: ತ್ರಿಪುರ ರಾಜ್ಯದ ಬಿಜೆಪಿ ಮೈತ್ರಿ ಪಕ್ಷವಾದ ಐ ಪಿಎಫ್ ಟಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಆಡಳಿತ ಪಕ್ಷಕ್ಕೆ ಕೈಕೊಟ್ಟು ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ತ್ರಿಪುರದಲ್ಲಿ ಒಟ್ಟು 2 ಲೋಕಸಭಾ ಸ್ಥಾನವಿದ್ದು ಎರಡರಲ್ಲೂ ಕಳೆದ ಚುನಾವಣೆಯಲ್ಲಿ ಸಿಪಿಎಂ ಜಯಗಳಿಸಿತ್ತು. ಈಶಾನ್ಯ ರಾಜ್ಯದ ಪ್ರಮುಖ ಪಕ್ಷವಾದ ಐಪಿಎಫ್ ಟಿ ಜೊತೆ ಈ ವರ್ಷದ ಜನವರಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿತ್ತು.

ಎರಡೂ ಪಕ್ಷಗಳ ಹೊಂದಾಣಿಕೆಯಂತೆ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತಂತೆ ಮಾತುಕತೆ ನಡೆದಿತ್ತು. ಆದರೆ ಒಂದೆರಡು ತಿಂಗಳ ಹಿಂದೆ ಎರಡೂ ಪಕ್ಷಗಳಿಗೂ ಹೊಂದಾಣಿಕೆ ಕೂಡಿಬಾರದ ಕಾರಣ ಪ್ರತ್ಯೇಕವಾಗಿ ಸ್ಪರ್ಧಿಸಲು ಎರಡೂ ಪಕ್ಷದ ನಾಯಕರು ತಿಳಿಸಿದ್ದಾರೆ.

ಸಿಬಿಐ ಐ ಪಿಎಫ್ ಟಿನ ಒರ್ವ ಶಾಸಕ ಒಳಗೊಂಡಂತೆ ಮೂವರು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ದಾಳಿ ನಡೆಸಿತ್ತು. ಈ ಘಟನೆ ಎರಡೂ ನಾಯಕರಲ್ಲೂ ಮನಸ್ತಾಪಕ್ಕೆ ಕಾರಣವಾಗಿತ್ತು. ಕಳೆದ ವರ್ಷ ನಡೆದ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ 25 ವರ್ಷದಿಂದ ಅಧಿಕಾರದಲ್ಲಿದ್ದ ಸಿಪಿಎಂ ಪಕ್ಷವನ್ನು ಮಣಿಸಿ ಬಿಜೆಪಿ ಮೈತ್ರಿಕೂಟ ಪಕ್ಷ ವಿಜಯ ಸಾಧಿಸಿ ರಾಜ್ಯಾಧ್ಯಕ್ಷ ಬಿಪ್ ಲಾಬ್ ಕುಮಾರ್ ದೇಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

Comments are closed.