ರಾಷ್ಟ್ರೀಯ

ಬುರಾರಿ ದುರಂತ: 10 ದಿನ ನಡೆದಿತ್ತು ಆತ್ಮಹತ್ಯೆ ತಯಾರಿ

Pinterest LinkedIn Tumblr


ನವದೆಹಲಿ: ದೆಹಲಿಯ ಬುರಾರಿಯಲ್ಲಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಂತೆ ಒಂದೊಂದೇ ಸತ್ಯಗಳು ಹೊರಬೀಳುತ್ತಿವೆ. ಆತ್ಮಹತ್ಯೆಗೂ 10 ದಿನಗಳ ಮುಂಚೆಯೇ ಕುಟುಂಬ ತಯಾರಿ ನಡೆಸಿತ್ತು. ಆತ್ಮಹತ್ಯೆಗೆ ಬಳಸಿದ ಸ್ಟೂಲ್, ಟೇಬಲ್ ಮತ್ತು ಬ್ಯಾಂಡೇಕಜ್​ನಂತಹ ವಸ್ತುಗಳನ್ನ ಕುಟುಂಬ ಕೊಂಡೊಯ್ಯುತ್ತಿರುವ ದೃಶ್ಯ ಪೊಲಿಸರಿಗೆ ಸಿಸಿಟಿವಿ ವಿಡಿಯೋದಲ್ಲಿ ಕಂಡುಬಂದಿದೆ.

ಸಂತನಗರದ ಮನೆಗೆ ನಿನ್ನೆ ಭೇಟಿ ನಿಡಿದ್ದ ಅಪರಾಧ ದಳ ಪೊಲೀಸರ ತಂಡ ಸಂಪೂರ್ಣ ಶೋಧ ನಡೆಸಿದ್ದು, ಕೆಲ ಮಾಹಿತಿ ಕಲೆಹಾಕಿದೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಸದಸ್ಯರ ಪೈಕಿ ಲಲಿತ್ ಭಾಟಿಯಾ ಮತ್ತು ಟೀನಾ ದಂಪತಿ, ಆತ್ಮಹತ್ಯೆಗೂ ಮುನ್ನ ಇತರ ಸದಸ್ಯರ ಕೈಕಾಲುಗಳನ್ನ ಕಟ್ಟಿಹಾಕಿದ್ದಾರೆ. ಬಳಿಕ ಅವರ ಜೊತೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನುತ್ತಾರೆ ಪೊಲೀಸರು.

ಮತ್ತೊಂದು ವಿಡಿಯೋದಲ್ಲಿ ಭವ್ನೇಶ್ ಪತ್ನಿ ಸವಿತಾ ಮತ್ತು ಟೀನಾ, ಜೂನ್ 30ರಂದು 5 ಸ್ಟೂಲ್ ಖರೀದಿಸಿರುವುದು ಕಂಡುಬಂದಿದೆ. ಕೆಲ ಸಮಯದ ಬಳಿಕ ಮಕ್ಕಳಾದ ಧೃವ್ ಮತ್ತು ಶಿವಂ ಆತ್ಮಹತ್ಯೆಗೆ ಬಳಸಿದ್ದ ಎಲೆಕ್ಟ್ರಿಕ್ ವೈರ್​ಗಳನ್ನ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಲಲಿತ್ ದಂಪತಿಯ ಪಾತ್ರದ ಬಗ್ಗೆ ತನಿಖೆ ಪ್ರಮುಖವಾಗಿ ಸಾಗಿದೆ ಎಂದು ಡಿಸಿಪಿ ಎನ್. ಟಿರ್ಕೆ ತಿಳಿಸಿದ್ದಾರೆ.

ಕಳೆದೆರೆಡು ತಿಂಗಳ ಸಿಸಿಟಿವಿ ವಿಡಿಯೋವನ್ನ ಕ್ರ್ಐಂ ಬ್ರಾಂಚ್ ಪರಿಶೀಲನೆ ನಡೆಸಿದ್ದು, ಈ ದಂಪತಿ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಸಾವಿಗೂ ಮುನ್ನ ನಡೆಸಿದ ಧಾರ್ಮಿಕ ಕಾರ್ಯಕ್ರಮದಲ್ಲಿ ದಂಪತಿ ಸಾಮಗ್ರಿಗಳನ್ನ ಕೊಂಡೊಯ್ದಿರುವುದು ಜುಲೈ 23 ಮತ್ತು 30ರ ನಡುವಿನ ವಿಡಿಯೋದಲ್ಲಿ ಕಂಡುಬಂದಿದೆ. ಜುಲೈ 27ರ ವಿಡಿಯೋದಲ್ಲಿ ದಂಪತಿ ಪ್ಲಾಸ್ಟಿಕ್ ಕವರ್​ನಲ್ಲಿ ವಾಸ್ತುವಿಗೆ ಸಂಬಂಧಿಸಿದ ವಸ್ತುಗಳನ್ನ ಕೊಂಡೊಯ್ದಿರುವುದು ತಿಳಿದುಬಂದಿದೆ. ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ನ್ಯೂಸ್ 18ಗೆ ಮಾಹಿತಿ ನೀಡಿದ್ಧಾರೆ.

ಸ್ಥಳೀಯ ರೆಸ್ಟೋರೆಂಟ್ ನೌಕರ ಹೇಳುವ ಪ್ರಕಾರ, ಜೂನ್ 30ರ ರಾತ್ರಿ ಲಲಿತ್ ಭಾಟಿಯಾ, 20 ಪೀಸ್ ಕೇಕ್ ಮಾದರಿಯ ಪದಾರ್ಥವನ್ನ ಆರ್ಡ್ರ್ ಮಾಡಿ ತರಿಸಿಕೊಂಡಿದ್ದರು. ಸಹೋದರ ಭ್ವನೇಶ್ ಬಳಿ ಹಣ ಪಡೆದು ನೀಡಿದರು ಎಂದು ತಿಳಿಸಿದ್ದಾರೆ.

ಘಟನೆ ನಡೆದ ದಿನ ಕೊನೆಯ ಬಾರಿಗೆ ಲಲಿತ್ ಬಾಟಿಯಾ ಮನೆಗೆ ಬಂದಿರುವುದು ಕಂಡುಬಂದಿದೆ. ಆತ್ಮಹತ್ಯೆ ಸಂದರ್ಭ 2ನೇ ಮಹಡಿಯಲ್ಲಿ ಕಟ್ಟಿ ಹಾಕಲಾಗಿದ್ದ ಕುಟುಂಬದ ಪ್ರೀತಿಯ ನಾಯಿಯ ಜೊತೆ ಭಾಟಿಯಾ ಸುಳಿದಾಡುತ್ತಿರುವ ದೃಶ್ಯ ಕಂಡುಬಂದಿದೆ. ಸಾಮಾನ್ಯವಾಗಿ ರಾತ್ರಿ ಸಂದರ್ಭ ನಾಯಿಯನ್ನ ಕಟ್ಟದೆ ಬಿಟ್ಟುಬಿಡುತ್ತಿದ್ದರು. ಆದರೆ, ಘಟನೆ ನಡೆದ ದಿನ ನಾಯೀ ವಿಚಿತ್ರವಾಗಿ ಬೊಗಳುತ್ತಿತ್ತು ಎನ್ನುತ್ತಾರೆ ನೆರೆಯವರು.

ಸೇನೆಯಲ್ಲಿದ್ದ ತಂದೆ ದಿವಂಗತ ಗೋಪಾಲ್ ದಾಸ್ ರೀತಿಯೇ ಲಲಿತ್ ಕೂಡ ಶಿಸ್ತಿನ ವ್ಯಕ್ತಿಯಾಗಿದ್ದು, ಕುಟುಂಬ ಸದಸ್ಯರಿಗೂ ಶಿಸ್ತಿನ ಪಾಠ ಮಾಡಿದ್ದರು. ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಮಾಡುಬೇಕಾದ, ಮಾಡಬಾರದ ವಿಷಯಗಳ ಬಗ್ಗೆ ರಿಹರ್ಸಲ್ ನಡೆಸಿದ್ದರು. ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಬೆಳಗಿನ ಪ್ರಾರ್ಥನೆ ಬಳಿಕ ಮಾನಸಿಕ ಪ್ರಾರ್ಥನೆ ಹೆಚ್ಚಲು ಸೇನಾನಿಗಳ ರೀತಿ ನಿಲ್ಲುವಂತೆ ಲಲಿತ್ ಸೂಚನೆ ನೀಡಿದ್ದರ ಬಗ್ಗೆ ಉಲ್ಲೇಖವಿದೆ.

ಹಿಂದಿನ ದಿನದ ಚಟುವಟಿಕೆಗಳ ಕುರಿತಂತೆ ನಿತ್ಯ ರೀಕಾಲ್ ಮಾಡುತ್ತಿದ್ದ ಲಲಿತ್, ಅವುಗಳನ್ನ ದಾಖಲು ಮಾಡುತ್ತಿದ್ದ. ಕುಟುಂಬ ಸದಸ್ಯರಿಗೆ ನೀಡಿದ ಚಟುವಟಿಕೆಗಳ ಬಗ್ಗೆ ಲಿಸ್ಟ್ ಮಾಡಿ ಇಟ್ಟಿದ್ದ. ಸಾವು ಮತ್ತು ನಿಗೂಢ ಆತ್ಮದ ಬಗ್ಗೆ ಲಲಿತ್ ಸಂಶೋಧನೆ ನಡೆಸುತ್ತಿದ್ದ. ಸ್ಮಾರ್ಟ್ ಫೋನಿನಲ್ಲಿ ಯೂಟ್ಯೂಬ್ ಬಳಸಿ ಅತಿಮಾನುಷ ಮತ್ತು ದೆವ್ವದ ಕಾರ್ಯಕ್ರಮಗಳನ್ನ ನೋಡುತ್ತಿದ್ದದ್ದು ಕಂಡುಬMದಿದೆ.

10-15 ದಿನಗಳಲ್ಲಿ ಸಂಪೂರ್ಣ ವೈದ್ಯಕೀಯ ವರದಿ ಕೈಸೇರಲಿದ್ದು, ಆತ್ಮಹತ್ಯೆಗೂ ಮುನ್ನ ಕುಟುಂಬ ಸದಸ್ಯರು ಊಟದಲ್ಲಿ ವಿಷ ಬೆರೆಸಿದ್ದರ ಎಂಬ ಬಗ್ಗೆ ಮಾಹಿತಿ ಸಿಗಲಿದೆ. ಮಾನಸಿಕ ವೈದ್ಯರ ನೆರವನ್ನು ಸಹ ಪಡೆದಿದ್ದು, ಈ ಘಟನೆಗೆ ಮಾನಸಿಕ ರೋಗವೇ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.