ರಾಷ್ಟ್ರೀಯ

ಮಹಿಳೆಯ ಮೇಲೆ ತಾವು ಮಾಡಿದ ಅತ್ಯಾಚಾರದ ವಿಡಿಯೋ ಮಾಡಿದ ಕಾಮುಕರು

Pinterest LinkedIn Tumblr


ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಮೂವರು ಕಾಮಾಂಧ ಪುರುಷರು ಓರ್ವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ವಿಡಿಯೋದಲ್ಲಿ ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಕಾಮಾಂಧ ಪುರುಷರಲ್ಲಿ “ಭಯ್ಯಾ ಐಸಾ ಮತ್‌ ಕರೋ’ ಎಂದು ಗೋಗರೆಯುವುದು ಕೇಳಿ ಬರುತ್ತದೆ. ಹಾಗಿದ್ದರೂ ಆ ಮೂರೂ ದುರುಳರು ಮಹಿಳೆಯ ಮೇಲೆ ಅತ್ಯಾಚಾರ ಮುಂದುವರಿಸಿದರಲ್ಲದೆ ತಮ್ಮ ದುಷ್ಕೃತ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಚಿತ್ರಿಕೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆದಾಗ ಎಚ್ಚೆತ್ತ ಪೊಲೀಸರು ಕೂಡಲೇ ಕ್ರಿಯಾಶೀಲರಾಗಿ ಮೂವರು ಅತ್ಯಾಚಾರಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸಫ‌ಲರಾಗಿದ್ದಾರೆ. ಮೂರನೇ ಆರೋಪಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಬಂಧಿತ ಅತ್ಯಾಚಾರಿಗಳನ್ನು ರಾಹುಲ್‌ ಮತ್ತು ಅಶೋಕ್‌ ಎಂದು ಗುರುತಿಸಲಾಗಿದೆ.

ಈ ವೈರಲ್‌ ವಿಡಿಯೋ ದ ಮೂಲವನ್ನು ಈಗ ಪೊಲೀಸರು ಶೋಧಿಸುತ್ತಿದ್ದಾರೆ. ಯಾರು, ಯಾವಾಗ, ಎಲ್ಲಿ ಈ ವಿಡಿಯೋ ಮಾಡಿದರು ಮತ್ತು ಅದನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಲಾದ ಮೂಲ ಯಾವುದು ಎಂಬುದನ್ನು ಪೊಲೀಸರು ಶೋಧಿಸುತ್ತಿದ್ದಾರೆ.

“ನಾವು ವಿಡಿಯೋ ದ ಮೂಲವನ್ನು ಶೋಧಿಸುತ್ತಿದ್ದೇವೆ; ನಮ್ಮ ತಂಡದವರು ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ. ಆರೋಪಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನಾವೋ ಎಸ್‌ಪಿ ಹೇಳಿದ್ದಾರೆ.

Comments are closed.