ವಯನಾಡ್, ಕೇರಳ : ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವ ದಂಪತಿ ಜಿಲ್ಲೆಯ ವೆಲ್ಲಮುಂಡದಲ್ಲಿನ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ದಂಪತಿಯ ಕುತ್ತಿಗೆ ಮತ್ತು ತಲೆಯಲ್ಲಿ ಗಾಯಗಳಿರುವುದು ಕಂಡುಬಂದಿದೆ. ದರೋಡೆ ಯತ್ನದಲ್ಲಿ ಈ ಕೊಲೆ ನಡೆದಿರಬಹುದೆಂಬ ಪೊಲೀಸರು ಶಂಕಿಸಿದ್ದಾರೆ. ಮೃತ ದಂಪತಿಯನ್ನು ಉಮ್ಮರ್ 28 ಮತ್ತು ಫಾತಿಮಾ ಎಂದು ಗುರುತಿಸಲಾಗಿದೆ.
ಉಮ್ಮರ್ ಅವರ ತಾಯಿ ಮಗನನ್ನು ಕಾಣಲೆಂದು ಆತನ ಮನೆಗೆ ಹೋಗಿದ್ದಾಗ ಎದುರುಗಡೆಯ ಬಾಗಿಲು ಒಳಗಿಂದ ಲಾಕ್ ಆಗಿತ್ತು. ಹಿಂಬದಿಯ ಬಾಗಿಲು ತೆರೆದಿತ್ತು. ಒಳಗೆ ಮಗ ಮತ್ತು ಸೊಸೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಕೆ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.