ರಾಷ್ಟ್ರೀಯ

ಅಮ್ಮನಿಲ್ಲದ ಪುಟ್ಟ ಬಾಲಕನ ಮೇಲೆ ಮಲತಾಯಿಯ ಕ್ರೌರ್ಯ !

Pinterest LinkedIn Tumblr

ಪುಟ್ಟ ಬಾಲಕನ ಮೇಲೆ ಮಲತಾಯಿಗೇಕೆ ಇಂತಾ ಕ್ರೌರ್ಯ. ಎಷ್ಟೇ ಆದರೂ ಅವನು ತನ್ನ ಮಗನಂತಲ್ಲವೇ. ಇಂತಾ ಆಲೋಚನೆ ಮಾಡದೇ ಮಲತಾಯಿಯೊಬ್ಬರು ಬಾಲಕನಿಗೆ ಚಿತ್ರಹಿಂಸೆ ನೀಡಿದ್ದಾಳೆ.

ಕೆಲಸ ನಿಮಿತ್ತ ಗಂಡ ಮನೆಯಿಂದ ಹೊರಹೋಗುತ್ತಿದ್ದಂತೆ ಮಲತಾಯಿ ಹಾಗೂ ಆಕೆಯ ಮಕ್ಕಳು ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಚಪ್ಪಲಿ ಮೆಟ್ಟಿರುವ ಕಾಲಿನಿಂದ ಬಾಲಕನ ತಲೆಗೆ ಒದ್ದಿರುವುದು. ಮಲತಾಯಿಯ ಕ್ರೌರ್ಯಕ್ಕೆ ಪುಟ್ಟ ಬಾಲಕ ಭಯಭೀತನಾಗಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಪುಟ್ಟ ಬಾಲಕ ನೋವಿನ ಕ್ಷಣಗಳು ನೋಡುಗರ ಮನಕಲಕುವಂತಿದೆ.

ಹೆಂಡತಿ ಮೃತಪಟ್ಟ ನಂತರ ಉದ್ಯಮಿ ಮನೆಯ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದಿದ್ದರಿಂದ ಎರಡನೇ ಮದುವೆ ಮಾಡಿಕೊಂಡು ಮನೆಯ ಜವಾಬ್ದಾರಿಯನ್ನು ಹೆಂಡತಿಗೆ ನೀಡಿದ್ದಾನೆ. ಎರಡನೇ ಹೆಂಡತಿಗೆ ಇದಕ್ಕೂ ಮುಂಚೆ ಮದುವೆಯಾಗಿದ್ದು ಆಕೆಗೆ ಮಕ್ಕಳಿದ್ದರು. ಮನೆಯಲ್ಲಿದ್ದ ಪುಟ್ಟ ಬಾಲಕ ಸಣ್ಣ ತಪ್ಪು ಮಾಡಿದ್ದರಿಂದ ಕೋಪಗೊಂಡ ಮಲ ತಾಯಿ ಆತನ ಮೇಲೆ ಹಲ್ಲೆ ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Comments are closed.