ರಾಷ್ಟ್ರೀಯ

ಯುವಕನಿಂದ ಉರಿವ ಸಿಲಿಂಡರ್‌ ಮೂಲಕ ಮಹಿಳೆಯ ಕೊಲೆಗೆ ಯತ್ನ!

Pinterest LinkedIn Tumblr


ಅಲಹಾಬಾದ್‌ : ಉರಿಯುತ್ತಿರುವ ಎಲ್‌ಪಿಜಿ ಸಿಲಿಂಡರ್‌ ಮೂಲಕ ಮಹಿಳೆಯನ್ನು ತರುಣನೋರ್ವ ಕೊಲ್ಲಲೆತ್ನಿಸಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‌ ನಗರದ ಕಿದ್‌ಗಂಜ್‌ ಎಂಬಲ್ಲಿ ನಡೆದಿದ್ದು ಇದರ ವಿಡಿಯೋ ಚಿತ್ರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಉಸ್ಮಾನಾ ಅನ್ಸಾರಿ ಎಂಬ ಮಹಿಳೆ ಅಫ್ತಾಬ್‌ ಎಂಬ ತರುಣನಿಗೆ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಳು. ಆದರೆ ಅಫ್ತಾಬ್‌ ಕಳೆದ ಮೂರು ವರ್ಷಗಳಿಂದ ಬಾಡಿಗೆಯನ್ನು ಬಾಕಿ ಇರಿಸಿದ್ದ. ಹಾಗಾಗಿ ಉಸ್ಮಾನಾ ಬಾಡಿಗೆ ಹಣಕ್ಕಾಗಿ ದುಂಬಾಲು ಬಿದ್ದಿದ್ದಳು.

ಉಸ್ಮಾನಾಗೆ ಬುದ್ದಿಕಲಿಸಲೆಂದು ಅಫ್ತಾಬ್‌ ಉರಿವ ಸಿಲಿಂಡರ್‌ ಮೂಲಕ ಆಕೆಯನ್ನು ಕೊಲ್ಲಲು ಯತ್ನಿಸಿದ. ಆದರೆ ಉಸ್ಮಾನಾ ಓಡಿ ಪಾರಾದಳು. ಒಂದೊಮ್ಮೆ ಸಿಲಿಂಡರ್‌ ಸ್ಫೋಟಗೊಂಡಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು.

ಈ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದುದನ್ನು ಗಮನಿಸಿದ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ; ಆದರೆ ಆರೋಪಿಯನ್ನು ಈ ತನಕ ಬಂಧಿಸಿಲ್ಲ

Comments are closed.