ರಾಷ್ಟ್ರೀಯ

ಮೋದಿ ಆಡಳಿತದಲ್ಲಿ ಅಪಾಯದಲ್ಲಿರುವ ಮುಸ್ಲಿಮರು: ಹಮೀದ್ ಅನ್ಸಾರಿ

Pinterest LinkedIn Tumblr


ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯ ಅಭದ್ರತೆ ಎದುರಿಸಿರುವುದ ಬಗ್ಗೆ ವರದಿ ಮಾಡಿದ್ದು, ಮುಸ್ಲಿಮರು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕಳವಳ ವ್ಯಕ್ತ ಪಡಿಸಿದ್ದಾರೆ. ನರೇಂದ್ರ ಮೋದಿ ಅಡಳಿತದಲ್ಲಿ ನಡೆದ ಕೆಲ ಘಟನೆಗಳು ಮುಸ್ಲಿಮರಿಗೆ ಅಸಮಾಧಾನ ತರಿಸಿದ್ದು, ಮುಸ್ಲಿಮರು ಇದರ ಬಗ್ಗೆ ಈಗ ಜಾಗೃತರಾಗಿದ್ದಾರೆ ಎಂದಿದ್ದಾರೆ.

ಉಪರಾಷ್ಟ್ರಪತಿ ಹುದ್ದೆಯಿಂದ ವಿಮರಮಿಸಿದ ಬಳಿಕ ಇದೇ ಮೊದಲ ಬಾರಿಗೆ ಆಂಗ್ಲ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಭಾರತ ಅನೈತಿಕ ಪ್ರಜಾಪ್ರಭುತ್ವದ ಕಡೆ ವಾಲುತ್ತಿದೆ ಎಂಬ ಆತಂಕ ಉಂಟಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತದ ತತ್ವ ಸಿದ್ದಾಂತಗಳು ಅಪಾಯದಲ್ಲಿದ್ದು, ಸಮಾಜ ಜಾತ್ಯಾತೀತ ತತ್ವವನ್ನು ಮರೆಯುತ್ತಿದೆ ಎಂದಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ ತತ್ವಗಳನ್ನು ಒಂದಲ್ಲಾ ಒಂದು ವಿಧದಲ್ಲಿ ಪ್ರಶ್ನೆ ಮಾಡಲಾಗುತ್ತದೆ, ಭಾರತದ ಬೆಳವಣಿಗೆಗೆ ಇದು ಮಾರಕ, ಕೆಲವರು ನಾವು ರಾಷ್ಟ್ರೀಯವಾದಿಗಳು ಎಂದು ಹೇಳುತ್ತಾರೆ. ಆದರೆ ರಾಷ್ಟ್ರೀಯತೆ ಎನ್ನುವುದು ನಮ್ಮ ಸಂವಿಧಾನದಲ್ಲೇ ಇದೆ. ಅದು ಇಡೀ ದೇಶದ ಎಲ್ಲ ನಾಗರಿಕನ್ನು ಒಳಗೊಳ್ಳುತ್ತದೆ. ಆದರೆ ಅದನ್ನು ಈಗ ಒಂದು ಕಾರಣ ಸಾಧಿಸಲು ಬಳಸಲಾಗುತ್ತದೆ ಎಂದಿದ್ದಾರೆ. ಅಲ್ಲದೇ

ಕೊಲೆ ಆರೋಪಗಳಿಗೆ ಕೇಂದ್ರ ಮಂತ್ರಿ ಜಯಂತ್ ಸಿನ್ಹಾ ಹೂಹಾರ ಹಾಕಿ ಸನ್ಮಾನ ಮಾಡಿದ್ದನ್ನು ಬಲವಾಗಿ ವಿರೋಧಿಸಿರುವ ಅವರು, ಸಾಮಾಜಿಕ ಜೀವನದಲ್ಲಿರುವವರು ಅಂಥ ಘಟನೆಗಲಿಗೆ ಬೆಂಬಲ ನೀಡಿದರೆ ರಾಷ್ಟ್ರಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಯಾವುದೇ ತ್ವ ಸಿದ್ಧಾಂತ ಪ್ರತಿಪಾದಿಸುವವರಾಗಿದ್ದರೂ, ಸಾರ್ವಜನಿಕ ಜೀವನದಲ್ಲಿ ಇಂಥ ಘಟನೆಗಳಿಗೆ ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ. ಅಲ್ಲದೇ ತ್ರಿವಳಿ ತಲಾಖ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವ ಅವರು, ನಾನು ಮತ್ತೊಮ್ಮೆ ಹೇಳುತ್ತೇನೆ ತ್ರಿವಳಿ ತಲಾಖ್ ಎನ್ನುವುದು ಇಸ್ಲಾಮಿನಲ್ಲಿ ಇಲ್ಲ. ಬೇಕಿದ್ದರೆ ಇಸ್ಲಾಮಿನ ಗ್ರಂಥಗಳನ್ನು ತೆಗೆದು ನೋಡಿ ಎಂದಿದ್ದಾರೆ.

Comments are closed.